ಸೇಬುಗಳು ತುಂಬಾ ಆರೋಗ್ಯಕರ ಹಣ್ಣುಗಳಲ್ಲಿ ಒಂದು. ಇದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹೆಚ್ಚು ಸೇವಿಸುವ ಹಣ್ಣು. ಇದರ ಅದ್ಭುತ ಗುಣಲಕ್ಷಣಗಳಿಂದಾಗಿ ಕೆಲವು ತಜ್ಞರು ಇದನ್ನು ಮ್ಯಾಜಿಕ್ ಹಣ್ಣು ಎಂದೂ ಕೂಡ ಕರೆಯುತ್ತಾರೆ. ಇದು ಚರ್ಮದ ಆರೋಗ್ಯದಿಂದ ಹಿಡಿದು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಸೇಬು ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ.
ಸಾಮಾನ್ಯವಾಗಿ ಎಲ್ಲರು ಸೇಬುಹಣ್ಣಿನ ಮೇಲ್ಭಾಗದ ಸಿಪ್ಪೆಗಳನ್ನ ತೆಗೆದು, ನಂತರ ಅದರ ಒಳಗಿನ ಬಿಳಿ ತಿರುಳನ್ನು ಸೇವಿಸುತ್ತಾರೆ. ಆದರೆ ಸೇಬು ಹಣ್ಣನ್ನು ಸಿಪ್ಪೆ ಸಹಿತ ಸೇವನೆ ಮಾಡುವುದರಿಂದ, ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಹಾಗಾದ್ರೆ ಏನೆಲ್ಲಾ ಪ್ರಯೋಜನಗಳಿವೆ ಅಂತ ತಿಳಿಯಲು ಮುಂದೆ ಓದಿ.
ಸೇಬಿನ ಸಿಪ್ಪೆಯಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ, ವಿಟಮಿನ್ಸ್‌ಗಳು, ಖನಿಜಾಂಶಗಳು, ಕರಗುವ ನಾರಿನಾಂಶಗಳು, ಕ್ಯಾಲ್ಸಿಯಂ, ಇತ್ಯಾದಿಗಳ ಆರೋಗ್ಯಕಾರಿ ಅಂಶಗಳು ಈ ಹಣ್ಣಿನ ಸಿಪ್ಪೆಯಲ್ಲಿ, ಹೆಚ್ಚಾಗಿ ಕಂಡು ಬರುತ್ತದೆ. ಮೆರೆವು ಅಥವಾ ನೆನೆಪಿನ ಶಕ್ತಿ ಸಮಸ್ಯೆಯನ್ನು ಹೋಗಲಾಡಿಸಲು, ದಿನಕ್ಕೊಂದು ಸೇಬು ಹಣ್ಣನ್ನು ಸಿಪ್ಪೆ ಸಮೇತ ತಿಂದರೆ ಒಳ್ಳೆಯದು.
ಯಾವುದೇ ರೀತಿಯ ಹುಳುಕು ಹಲ್ಲಿನ ಸಮಸ್ಯೆಗಳು ಉಂಟಾಗದೇ, ಹಲ್ಲುಗಳು ಮತ್ತು ವಸಡುಗಳು ಗಟ್ಟಿಯಾಗಿ ಆರೋಗ್ಯಕರವಾದ ಹಲ್ಲುಗಳನ್ನು ಹೊಂದಲು ಸೇಬಿನ ಸಿಪ್ಪೆ ನೆರವಾಗುತ್ತದೆ. ಹಾಗೂ ಮಧುಮೇಹ ಕಾಯಿಲೆಗೆ ಸೇಬುಹಣ್ಣುನ್ನು ಸಿಪ್ಪೆ ಸಮೇತ ಸೇವಿಸುವ ಅಭ್ಯಾಸವನ್ನು ರೂಢಿ ಮಾಡಿಕೊಂಡರೆ ಮಧುಮೇಹದಿಂದ ಪಾರಾಗಲು ಸಹಾಯ ಮಾಡುತ್ತದೆ.
ಸಕ್ಕರೆ ಕಾಯಿಲೆ ಇರುವವರು ಸಿಪ್ಪೆಯ ಸಹಿತ ಸೇಬುಹಣ್ಣನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ಹಾಗೂ ಯಾರು ಸೇಬು ಹಣ್ಣನ್ನು ಸಿಪ್ಪೆ ಸಮೇತ ತಿನ್ನುತ್ತಾರೋ ಅವರಿಗೆ ಕ್ಯಾನ್ಸರ್ ಕಾಯಿಲೆ ಉಂಟಾಗುವ ಸಾಧ್ಯತೆ ಕಮ್ಮಿ ಇರುತ್ತದೆಯಂತೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ




