Thursday, October 16, 2025

Latest Posts

ಡಿಕೆಶಿ CM ಆಗೋದು ಖಚಿತ, ಆಗ ಕುಣಿಗಲ್​ಗೆ ನಾನೇ ಸಿಎಂ ಎಂದ ಶಾಸಕ ರಂಗನಾಥ್..!

- Advertisement -

ತಮಕೂರು: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗೋದು ಖಚಿತ. ಡಿಕೆಶಿ ಮುಖ್ಯಮಂತ್ರಿ ಆದರೆ ಕುಣಿಗಲ್​ಗೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಕುಣಿಗಲ್ ಕ್ಷೇತ್ರದ ಶಾಸಕ ಡಾ.ಎಚ್​.ಡಿ.ರಂಗನಾಥ್ ಹೇಳಿರುವ ವಿಡಿಯೋ ಸದ್ಯ ವೈರಲ್​ ಆಗುತ್ತಿದೆ.

ಕುಣಿಗಲ್ ಕ್ಷೇತ್ರದ ಹಳ್ಳಿಯೊಂದರಲ್ಲಿ ರಸ್ತೆ ಸಮಸ್ಯೆ ಇದೆ ಎಂದು ಹೇಳಿಕೊಂಡ ಮತದಾರರಿಗೆ ಸಮಸ್ಯೆ ಬಗೆಹರಿಸುವೆ ಎಂದ ಶಾಸಕ, ನಿಮಗೆ ಒಂದು ಸವಾಲು ಬರುತ್ತೆ.

ನೀವೆಲ್ಲ ಡಿಕೆಶಿ ಮುಖ್ಯಮಂತ್ರಿ ಆಗುವಂತೆ ಕಾಂಗ್ರೆಸ್​ಗೆ ಮತ ಹಾಕಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತಗೊಂಡು ಕಾಂಗ್ರೆಸ್​ಗೆ ಬೆಂಬಲಿಸಬೇಕು, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದನಂತರ ಕ್ಷೇತ್ರದ ಅಭಿವೃದ್ಧಿ ಖಂಡಿತಾ ಆಗುತ್ತೆ. ಡಿಕೆಶಿ ಸಿಎಂ ಆದರೆ ಕುಣಿಗಲ್​ಗೆ ನಾನೇ ಮುಖ್ಯಮಂತ್ರಿ ಆದಂತೆ. ಎಲ್ಲರ ಆಶೀರ್ವಾದ ನಮ್ಮ ಮೇಲಿರಲಿ, ನಿಮ್ಮೂರಿಗೆ ರಸ್ತೆ ಸೇರಿದಂತೆ ಅಭಿವೃದ್ಧಿ ಕೆಲಸ ಮಾಡಲು ಕ್ರಮ ಕೈಗೊಳ್ಳುವೆ ಎಂದು ಕೈಮುಗಿದು ಕಾರನ್ನು ಹತ್ತುತ್ತಿರುವ ದೃಶ್ಯ ವೈರಲ್ ಆಗುತ್ತಿದೆ.

ಅಭಿಜಿತ್ ಕರ್ನಾಟಕ ಟಿವಿ ಬೆಂಗಳೂರು.

 

 

- Advertisement -

Latest Posts

Don't Miss