Friday, December 27, 2024

Latest Posts

ಅಯೋಧ್ಯೆ ರಾಮನಿಗೆ ಬರೋಬ್ಬರಿ 400 ಕೆಜಿ ತೂಕದ ಬೀಗ, 30ಕೆಜಿ ಕೀ.

- Advertisement -

ಅಯೋಧ್ಯಾ ರಾಮಮಂದಿರವು 3 ಹಂತಗಳಲ್ಲಿ ನಿರ್ಮಾಣ ಆಗಲಿದ್ದು, ಗರ್ಭ ಗೃಹ ನಿರ್ಮಾಣ ಕಾರ್ಯ 2023ರಲ್ಲಿ ಪೂರ್ಣಗೊಂಡರೆ, ದೇಗುಲದ ನಿರ್ಮಾಣ 2024ರಲ್ಲಿ ಪೂರ್ಣಗೊಳ್ಳಲಿದೆ. ಇನ್ನು ಅಯೋಧ್ಯಾ ರಾಮಮಂದಿರದ ಸುತ್ತಲಿನ ಸಂಕೀರ್ಣ ನಿರ್ಮಾಣ ಕಾರ್ಯವು 2025ರ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ಟ್ರಸ್ಟ್‌ ಮಾಹಿತಿ ನೀಡಿದೆ.

ಆಗಸ್ಟ್ 5, 2020 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಯೋಧ್ಯಾ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಬಳಿಕ ಕ್ಷಿಪ್ರ ಗತಿಯಲ್ಲಿ ನಿರ್ಮಾಣ ಕಾರ್ಯ ಆರಂಭವಾಯ್ತು.

ಬುಧವಾರ ಬೆಳಗ್ಗೆ ಶಿವ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭ
ಅಡಿಗಲ್ಲು ಹಾಕುವ ಮೂಲಕ ಗರ್ಭ ಗುಡಿ ನಿರ್ಮಾಣಕ್ಕೆ ಸಾಂಕೇತಿಕ ಚಾಲನೆ
ಕುಶಲ ಕಾರ್ಮಿಕರು ಕೆತ್ತನೆ ಮಾಡಿದ ಶಿಲ್ಪವನ್ನು ಅಡಿಗಲ್ಲನ್ನಾಗಿ ಬಳಸಿದ ಯೋಗಿ
Adv: ಸ್ಮಾರ್ಟ್‌ವಾಚ್‌ ಹಾಗೂ ಫಿಟ್‌ನೆಸ್‌ ಬ್ಯಾಂಡ್‌ ನಿಮ್ಮದಾಗಿಸಿ ಆಕರ್ಷಕ ಬೆಲೆಯಲ್ಲಿ!
ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯಾ ರಾಮ ಮಂದಿರದ ಗರ್ಭ ಗುಡಿ ನಿರ್ಮಾಣಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಬುಧವಾರ ಬೆಳಗ್ಗೆ ಶಿವ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯ್ತು. ನಂತರ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಡಿಗಲ್ಲು ಹಾಕುವ ಮೂಲಕ ಗರ್ಭ ಗುಡಿ ನಿರ್ಮಾಣಕ್ಕೆ ಸಾಂಕೇತಿಕ ಚಾಲನೆ ನೀಡಿದರು.

ಅಯೋಧ್ಯೆಯ ರಾಮನಿಗೆ ಬರೋಬ್ಬರಿ 400 ಕೆ.ಜಿ ತೂಕದ ಬೀಗ : 30 ಕೆ.ಜಿಯ ಕೀ

ಅಯೋಧ್ಯಾ ಶ್ರೀರಾಮ ಮಂದಿರದ ಗರ್ಭ ಗುಡಿ ನಿರ್ಮಾಣ ಕಾರ್ಯವು ಡಿಸೆಂಬರ್ 2023ರ ಒಳಗಾಗಿ ಮುಕ್ತಾಯವಾಗುವ ಸಾಧ್ಯತೆ ಇದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ತಿಳಿಸಿದೆ. ಇದೇ ಟ್ರಸ್ಟ್‌ ರಾಮಮಂದಿರ ನಿರ್ಮಾಣ ಕಾರ್ಯದ ಮೇಲುಸ್ತುವಾರಿ ವಹಿಸಿಕೊಂಡಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಯೋಧ್ಯಾ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ನ್ರಿಪೇಂದ್ರ ಮಿಶ್ರಾ ಅವರು, ಬುಧವಾರವೇ ಗರ್ಭ ಗುಡಿ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ ಎಂದರು. ಅಯೋಧ್ಯಾ ರಾಮಮಂದಿರವು 3 ಹಂತಗಳಲ್ಲಿ ನಿರ್ಮಾಣ ಆಗಲಿದ್ದು, ಗರ್ಭ ಗೃಹ ನಿರ್ಮಾಣ ಕಾರ್ಯ 2023ರಲ್ಲಿ ಪೂರ್ಣಗೊಂಡರೆ, ದೇಗುಲದ ನಿರ್ಮಾಣ 2024ರಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಇನ್ನು ದೇಗುಲ ಸುತ್ತಲಿನ ಸಂಕೀರ್ಣ ನಿರ್ಮಾಣ ಕಾರ್ಯವು 2025ರ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.

ಅಭಿಜಿತ್ ಕರ್ನಾಟಕ ಟಿವಿ ಬೆಂಗಳೂರು.

- Advertisement -

Latest Posts

Don't Miss