ಬಾಲಿವುಡ್ ಹಾಗೂ ತಮಿಳು ಚಿತ್ರರಂಗದಲ್ಲಿ ಸಖತ್ ಫೇಮಸ್ ಆಗಿರುವ ನಟ ಅಂದರೆ ಅದು ಆರ್.ಮಾಧವನ್. ಇಂದು ಅವರು ತಮ್ಮ 52 ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದ್ದಾರೆ.
ಇವರು ಏಳು ಭಾಷೆಗಳಲ್ಲಿ ನಟಿಸಿರುವ ನಟ ಆರ್ ಮಾಧವನ್ ಅವರು ಒಬ್ಬ ಭಾರತೀಯ ಚಿತ್ರರಂಗದ ನಟ, ನಿರ್ದೇಶಕ, ಬರಹಗಾರ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ. ಭಾರತೀಯ ಚಿತ್ರರಂಗದಲ್ಲಿ ರೊಮ್ಯಾಂಟಿಕ್ ಹೀರೋ ಆಗಿಯೇ ಮಾಧವನ್ ಹೆಚ್ಚು ಗುರುತಿಸಿಕೊಂಡಿದ್ದಾರೆ. ಆದರೆ ಮಾಧವನ್, ಅವರು ಅಭಿಮಾನಿಗಳ ಪಾಲಿಗೆ ಈಗಲೂ ಮ್ಯಾಡಿ ಎಂದೇ ಫೇಮಸ್.
ಮಾಧವನ್ ಕನ್ನಡದ ‘ಶಾಂತಿ ಶಾಂತಿ ಶಾಂತಿ’ ಸಿನಿಮಾದಲ್ಲಿ ಕೂಡ ಬಣ್ಣ ಹಚ್ಚಿದ್ದರು. ಸದ್ಯ ಅವರು ವಿಭಿನ್ನವಾದ ಪಾತ್ರಗಳ ಆಯ್ಕೆ ಮಾಡಿಕೊಂಡು ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಈಗಲೂ ಸಹ ಚಿತ್ರರಂಗದಲ್ಲಿ ಬ್ಯುಸಿ ಇರುವ ನಟರಲ್ಲಿ ಮಾಧವನ್ ಕೂಡ ಒಬ್ಬರು. ಇದೀಗ ಮಾಧವನ್ ಹಲವಾರು ಸಿನಿಮಾ ಹಾಗೂ ವೆಬ್ಸೀರಿಸ್ಗಳನ್ನು ಒಪ್ಪಿಕೊಂಡಿದ್ದು, ಅದರ ಕೆಲಸದಲ್ಲಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ