ಬೆಂಗಳೂರಲ್ಲಿ ಈಗಂತೂ ಗಲ್ಲಿ ಗಲ್ಲಿಗೂ ಒಂದೊಂದು ಹೋಟೆಲ್‌ಗಳು ಇದ್ದೇ ಇರುತ್ತೆ. ಆದ್ರೆ ಕಡಿಮೆ ಬೆಲೆಗೆ ಶುಚಿ, ರುಚಿಯಾದ ಆಹಾರ ಸಿಗೋದು ತೀರಾ ವಿರಳ. ತುಂಬಾ ಜನರು ಈಗ ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ವಹಿಸ್ತಾರೆ. ಮನಯಲ್ಲಿ ಅಡುಗೆ ಮಾಡಲಾಗದ ಪರಿಸ್ಥಿತಿ ಇದ್ದುಮ ಹೊರಗಡೆಯ ಹೋಟೆಲ್‌ಗಳನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವವರು ಸಿಲಿಕಾನ್ ಸಿಟಿಯಲ್ಲಿ ಸಿಕ್ಕಾಪಟ್ಟೆ ಜನರಿದ್ದಾರೆ. ಅಂತಹವರಿಗೆ ಮಧ್ಯಮ ವರ್ಗದವರಿಗೆ ಹಾಗೂ ಬ್ಯಾಚುಲರ್ಸ್ ಗೆ ನಾವೀಗ ಪರಿಚಯಿಸೋ ಹೋಟೆಲ್ ತುಂಬಾ ಸಹಾಯಕಾರಿಯಾಗುತ್ತೆ.
ಯಾಕಂದರೆ ಇಲ್ಲಿ ಸಿಗೋ ಊಟ ನಿಮಗೆ ಶುಚಿ ರುಚಿಯ ಜೊತೆಗೆ ಸಿಕ್ಕಾಪಟ್ಟೆ ಟೇಸ್ಟಿಯಾಗಿರುತ್ತೆ. ಎಲ್ಲಿ ಅಂತೀರಾ, ವಿಲ್ಸನ್ ಗಾರ್ಡನ್. ಹೌದು, ವಿಲ್ಸನ್ ಗಾರ್ಡನ್‌ನಲ್ಲಿರೋ ಈ ದೋಸೆ ಕ್ಯಾಂಪ್‌ಗೆ ಸುಮಾರು 40 ವರ್ಷಗಳ ಇತಿಹಾಸವಿದೆ.
ಮಧ್ಯಾಹ್ನ 2 ಗಂಟೆಯಿAದ ರಾತ್ರಿ 11.30ರವರೆಗೆ ಈ ಹೋಟೆಲ್ ತೆರೆದಿರುತ್ತೆ. ಇಲ್ಲಿನ ವಿಶೇಷ ಏನಂದ್ರೆ ಎಲ್ಲಾ ರೀತಿಯ ದೋಸೆಗಳು ಸಿಗುತ್ತೆ, ಆದರೆ ಅದ್ರಲ್ಲಿ ಈರುಳ್ಳಿ ದೋಸೆಗೆ ಇಲ್ಲಿ ತೀರಾನೇ ಡಿಮ್ಯಾಂಡ್ ಇದೆ. ಒಮ್ಮೆ ಈ ದೋಸೆ ಕ್ಯಾಂಪ್‌ನಲ್ಲಿ ನೀವು ಟೇಸ್ಟ್ ಮಾಡಿದ್ದೀರಿ ಎಂದರೆ, ಮತ್ತೆ ಮತ್ತೆ ಹೋಗೋದು ಖಚಿತ.
ನಳಿನಾಕ್ಷಿ ಕಾರಹಳ್ಳಿ, ಕರ್ನಾಟಕ ಟಿವಿ