- Advertisement -
ಬೆಂಗಳೂರು: ಮೇ.31ರಂದು ದಿಢೀರ್ ಬಿಎಂಟಿಸಿಯಿಂದ ಕಟ್ಟಡ ಕಾರ್ಮಿಕರಿಗೆ ವಿತರಿಸಲಾಗುತ್ತಿದ್ದಂತ ಸಹಾಯ ಹಸ್ತದ ಬಿಎಂಟಿಸಿ ಬಸ್ ಪಾಸ್ ಸ್ಥಗಿತಗೊಳಿಸಿ ಆದೇಶಿಸಲಾಗಿತ್ತು. ಇಂದು ಮತ್ತೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಪಾಸ್ ವಿತರಣೆ ಪುನರಾರಂಭಿಸಿ ಆದೇಶಿಸಿದೆ.
ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕರು ಈ ಕುರಿತಂತೆ ಆದೇಶ ಹೊರಡಿಸಿದ್ದಾರೆ. ದಿನಾಂಕ 01-06-2022ರಿಂದ ಜಾರಿಗೆ ಬರುವಂತೆ ಕಟ್ಟಡ ಕಾರ್ಮಿಕರಿಗೆ ವಿತರಿಸಲಾಗುತ್ತಿದ್ದಂತ ಬಿಎಂಟಿಸಿಯ ಸಹಾಯ ಹಸ್ತದ ಪಾಸ್ ವಿತರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದ್ರೇ.. ಸೂಕ್ತ ಅಧಿಕಾರಿಗಳ ನಿರ್ದೇಶನದಂತೆ ಮತ್ತೆ ಸಹಾಯ ಹಸ್ತದ ಬಸ್ ಪಾಸ್ ಗಳನ್ನು ತಕ್ಷಣದಿಂದ ಪ್ರಾರಂಭಿಸುವಂತೆ ಸೂಚಿಸಿದ್ದಾರೆ.
- Advertisement -