- Advertisement -
ಬೆಂಗಳೂರು: ರಾಜ್ಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ವಿವಾದದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಸರ್ಕಾರ ರೋಹಿತ್ ಚಕ್ರತೀರ್ಥ ಸಮಿತಿಯನ್ನು ವಿಸರ್ಜಿಸಿ ಆದೇಶದ ಬೆನ್ನಲ್ಲೇ, ಸಮಿತಿಯ ಮತ್ತೊಂದು ಯಡವಟ್ಟು ಬಯಲಾಗಿದೆ. 3, 4ನೇ ತರಗತಿ ಪುಸ್ತಕಗಳಲ್ಲಿ ಇಡಲಾಗಿದೆ.
ಬಾವಿಯಲ್ಲಿ ಚಂದ್ರ ಎನ್ನುವಂತ ಶೀರ್ಷಿಕೆಯ ಕವಿ ಬಿ.ಎಂ ಶರ್ಮಾ ಅವರ ಕವಿತೆಯನ್ನು 3ನೇ ತರಗತಿ ಮತ್ತು 4ನೇ ತರಗತಿ ಪಠ್ಯದಲ್ಲಿ ಸೇರಿಸಿ ಎಡವಟ್ಟು ಮಾಡಿದೆ. ಈ ಪದ್ಯವನ್ನು ಬರಗೂರು ರಾಮಚಂದ್ರಪ್ಪ ಅವರ ಸಮಿತಿಯು ಈ ಹಿಂದೆ 3ನೇ ತರಗತಿ ಪಠ್ಯದಲ್ಲಿ ನಲಿ-ಕಲಿ ಭಾಗವಾಗಿ ಸೇರಿಸಿತ್ತು.
ಇದೀಗ ರೋಹಿತ್ ಚಕ್ರತೀರ್ಥ ಅವರ ಸಮಿತಿಯು 4ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿಯೂ ಇದೇ ಪದ್ಯವನ್ನು ಸೇರಿಸಲಾಗಿದ್ದು, ಪಾಠ ಮಾಡುವಂತ ಶಿಕ್ಷಕರಿಗೆ ಗೊಂದಲವನ್ನು ಉಂಟು ಮಾಡಿದೆ.
- Advertisement -