ಕೇಂದ್ರ ಸರಕಾರವು ಉಕ್ಕು ರಫ್ತಿನ ಮೇಲೆ ರಫ್ತು ಸುಂಕ ವಿಧಿಸಿದ ಹಿನ್ನೆಲೆ ಕಳೆದ ಎರಡು ವಾರಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆಗಳು ಶೇಕಡ 10ರಷ್ಟು ಇಳಿಕೆಯಾಗಿದ್ದು, ಒಟ್ಟಾರೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಪ್ರತಿ ಟನ್ ಕಬ್ಬಿಣದ ಬೆಲೆ 15,000 ರೂ.ವರೆಗೆ ಕುಸಿತ ಕಂಡಿದೆ.
ಉಕ್ಕು ರಫ್ತಿನ ಮೇಲೆ ಕೇಂದ್ರ ಸರಕಾರ ಸುಂಕ ವಿಧಿಸಿದ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆಗಳು ಶೇ. 10ರಷ್ಟು ಕಡಿಮೆಯಾಗಿವೆ. ಒಟ್ಟಾರೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಪ್ರತಿ ಟನ್ ಉಕ್ಕಿನ ಬೆಲೆ 15,000 ರೂ.ವರೆಗೆ ಕುಸಿತ ಕಂಡಿದೆ.
ಮಾರುಕಟ್ಟೆ ಗುಪ್ತಚರ ಸಂಸ್ಥೆಯಾದ ಸ್ಟೀಲ್ಮಿಂಟ್ ಪ್ರಕಾರ ಮೇ 18ರಿಂದ ದೇಶೀಯ ಬೆಂಚ್ಮಾರ್ಕ್ ಹಾಟ್-ರೋಲ್ಡ್ ಕಾಯಿಲ್ (ಎಚ್ಆರ್ಸಿ) ಉಕ್ಕಿನ ಬೆಲೆಗಳು ಸುಮಾರು ಶೇ. 8 ಅಥವಾ ಟನ್ಗೆ 5,500 ರೂ. ಇಳಿಕೆಯಾಗಿವೆ. ಪ್ರತಿ ಟನ್ ಉಕ್ಕಿನ ಬೆಲೆ 63,800ರೂ.ಗೆ ಇಳಿದಿದೆ. ಇದೇ ಬೆಲೆ ಏಪ್ರಿಲ್ ಮೊದಲ ವಾರದಲ್ಲಿ ಗರಿಷ್ಠ 78,800 ರೂ.ಗೆ ಏರಿಕೆಯಾಗಿತ್ತು.
ಸರ್ಕಾರವು ಮೇ 22ರಿಂದ ಜಾರಿಗೆ ಬರುವಂತೆ ಉಕ್ಕಿನ ಮೇಲೆ ಶೇ. 15ರಷ್ಟು ರಫ್ತು ಸುಂಕವನ್ನು ವಿಧಿಸಿತ್ತು. ಹಣದುಬ್ಬರವನ್ನು ತಡೆಯುವ ಪ್ರಯತ್ನದ ಭಾಗವಾಗಿ ಈ ನಿರ್ಬಂಧ ಹೇರಿತ್ತು. ಜತೆಗೆ ಉಕ್ಕಿನ ಉತ್ಪಾದನೆಯ ವೆಚ್ಚವನ್ನು ಕಡಿಮೆ ಮಾಡಲು ಕಲ್ಲಿದ್ದಲಿನಂತಹ ಪ್ರಮುಖ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನೂ ಕಡಿತಗೊಳಿಸಿತ್ತು.
ಬೆಲೆ ಏರಿಕೆಯಲ್ಲಿ ಮನೆ ಕಟ್ಟೋದು ಹೇಗಪ್ಪ ಎಂದು ತಲೆಕೆಡಿಸಿಕೊಂಡವರಿಗೆ ಕೊಂಚ ರಿಲೇಕ್ಸ್ ಆಗಿದೆ, ಇವೆಲ್ಲದರ ಪರಿಣಾಮ ಈಗ ದೇಶೀಯ ಮಾರುಕಟ್ಟೆಯಲ್ಲಿ ಕಬ್ಬಿಣದ ಬೆಲೆ ಇಳಿಕೆಯಾಗಿದೆ.
ಅಭಿಜಿತ್ ಕರ್ನಾಟಕ ಟಿವಿ ಬೆಂಗಳೂರು