ಮನೆ ಮುಂದೆ ಮೀನು ಮಾರಾಟಕ್ಕೆ ಅಕ್ಷೇಪಿಸಿ ರೌಡಿ ಶೀಟರ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಬೆಂಗಳೂರಿನ ಕೆ.ಎಚ್.ಬಿ ಕಾಲೋನಿಯಲ್ಲಿ ನಡೆದಿದೆ.
ಮೀನು ತೆಗೆದುಕೊಳ್ಳುವ ವಿಚಾರಕ್ಕೆ ಶುರವಾದ ಗಲಾಟೆ, ಕೊಲೆಗಳ ಮೂಲಕ ಅಂತ್ಯವಾಗಿದೆ. ಹೌದು ರಾಜಧಾನಿ ಬೆಂಗಳೂರಿನ ಕೆ.ಎಚ್.ಬಿ ಕಾಲೋನಿಯಲ್ಲಿ ಮೀನು ತೆಗೆದು ಕೊಳ್ಳುವ ವಿಚಾರಕ್ಕೆ ಕಾಲೋನಿಯ ನಿವಾಸಿ ಪ್ರಶಾಂತ್ ಮತ್ತು ನೆರೆಮನೆಯ ನಿವಾಸಿ ಅರ್ಜುನ್ ಪರಸ್ಪರ ಜಗಳವಾಡಿದ್ದರು. ಈ ವೇಳೆ ಪ್ರಶಾಂತ್ ಗೆ ಚಾಕುವಿನಿಂದ ಇರಿದು ಅರ್ಜುನ್ ಪರಾರಿಯಾಗಿದ್ದಾನೆ. ಹಿಂದೆ ಮರ್ಡರ್ ಕೇಸ್ ಒಂದರಲ್ಲೂ ಕೂಡ ಈತ ರೌಡಿ ಶೀಟರ್ ಆಗಿದ್ದ.
ಇನ್ನು ಚಾಕುವಿನಿಂದ ತೀವ್ರ ಗಾಯಗೊಂಡಿದ್ದ ಪ್ರಶಾಂತ್ ರಕ್ತ ಸ್ತ್ರಾವದಿಂದ ದಾರಿ ಮಧ್ಯೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನಪ್ಪಿದ್ದಾನೆ. ಸದ್ಯ ಈ ಕುರಿತು ಪುಲಕೇಶಿ ನಗರದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅರ್ಜುನ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.