ಶಿವಮೊಗ್ಗ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕ್ರಮ ಯೋಜನೆಗೆ ಸೊರಬ ತಾಲೂಕು ಪಂಚಾಯಿತಿಯಲ್ಲಿ ಎಂ.ಆರ್.ಡಬ್ಲ್ಯೂ ಹಾಗೂ ಜಡೆ ಮತ್ತು ದ್ಯಾವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರೆಂದು (ವಿ.ಆರ್.ಡಬ್ಲ್ಯೂ) ಗೌರವಧನ ಆಧಾರದ ಮೇರೆಗೆ ತಾತ್ಕಾಲಿಕವಾಗಿ ಆಯ್ಕೆ ಮಾಡಲು 45 ವರ್ಷ ವಯೋಮಿತಿಯೊಳಗಿನ 10ನೇ ತರಗತಿ ಪಾಸಾಗಿರುವ ಸ್ಥಳೀಯ ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ನಿಗಧಿತ ನಮೂನೆ ಅರ್ಜಿಗಳನ್ನು ಸೊರಬ ತಾಲೂಕು ಪಂಚಾಯಿತಿಯ ಎಂ.ಆರ್.ಡಬ್ಲ್ಯೂ ಅವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ದಿ: 22/06/2022 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನಿಗಧಿತ ನಮೂನೆ ಅರ್ಜಿ ಮತ್ತು ಮಾಹಿತಿಗಾಗಿ ಭರತ್‍ಕುಮಾರ್ (ಎಂ.ಅರ್.ಡಬ್ಲ್ಯೂ) ಮೊ.ಸಂ.: 9110493122 ನ್ನು ಸಂಪರ್ಕಿಸುವುದು.