ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಗೆ ಹಾಜರಾಗುವವರೇ ಗಮನಿಸಿ: ವಿಶೇಷ ರೈಲು ವ್ಯವಸ್ಥೆ

ಬೆಂಗಳೂರು: ರೈಲ್ವೆ ನೇಮಕಾತಿ ಮಂಡಳಿಯ ಪರೀಕ್ಷೆಗಳ ಪ್ರಯುಕ್ತ ಅಭ್ಯರ್ಥಿಗಳ ಸಂಚಾರಕ್ಕಾಗಿ ಕೆಳಗೆ ವಿವರಿಸಿದಂತೆ 12 ಕಾರುಗಳ ಮೆಮು ವಿಶೇಷ ರೈಲು 11.06.2022 ರಂದು ಕಡಪದಿಂದ ಬೆಂಗಳೂರಿಗೆ ಮತ್ತು 12.06.2022 ರಂದು ಕೆಎಸ್ಆರ್ ಬೆಂಗಳೂರಿನಿಂದ ಕಡಪಗೆ ಸಂಚರಿಸಲಿದೆ

ರೈಲು ಸಂಖ್ಯೆ.07582/07585 ಕಡಪ – ಕೆಎಸ್ಆರ್ ಬೆಂಗಳೂರು – ಕಡಪ ಪರೀಕ್ಷೆ ವಿಶೇಷ ರೈಲು ಸಂಚರಿಸಲಿದೆ.

ರೈಲು ಸಂಖ್ಯೆ.07582 ಕಡಪ – ಕೆಎಸ್ಆರ್ ಬೆಂಗಳೂರು ಪರೀಕ್ಷಾ ವಿಶೇಷ ರೈಲು 11.06.2022 ರಂದು 09.00 ಗಂಟೆಗೆ ಕಡಪದಿಂದ ಹೊರಟು 17.30 ಗಂಟೆಗೆ ಕೆಎಸ್ಆರ್ ಬೆಂಗಳೂರು ತಲುಪುತ್ತದೆ.

ಪುನಃ, ರೈಲು ಸಂಖ್ಯೆ.07585 ಕೆಎಸ್ಆರ್ ಬೆಂಗಳೂರು – ಕಡಪ ಪರೀಕ್ಷಾ ವಿಶೇಷ ರೈಲು ಕೆಎಸ್ಆರ್ ಬೆಂಗಳೂರಿನಿಂದ 12.06.2022 ರಂದು 19.15 ಗಂಟೆಗೆ ಹೊರಟು 13.12.2022 ರಂದು ಬೆಳಿಗ್ಗೆ 05.00 ಗಂಟೆಗೆ ಕಡಪ ತಲುಪುತ್ತದೆ.

ರೈಲಿಗೆ ರಾಜಂಪೇಟ, ಕೋಡೂರು, ರೇಣಿಗುಂಟ (ಮೇಲ್ಪಾಕ್ಕಂ ಮೂಲಕ) ಕಟ್ಪಾಡಿ, ಜೋಲಾರ್‌ಪೇಟ್ಟೈ ಮತ್ತು ಬೆಂಗಳೂರು ಪೂರ್ವ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

About The Author