Thursday, December 5, 2024

Latest Posts

ಎಂಬಿಬಿಎಸ್ ಅಂತಿಮ ವರ್ಷಕ್ಕೆ ಹೊಸ ಪ್ರಾಯೋಗಿಕ ಪರೀಕ್ಷೆ!

- Advertisement -

ಬೆಂಗಳೂರು: ಎಂಬಿಬಿಎಸ್ ಪದವಿಯ ಅಂತಿಮ ವರ್ಷದ 41 ವಿದ್ಯಾರ್ಥಿಗಳಿಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಲವು ಹೊಸದಾಗಿ ಪ್ರಾಯೋಗಿಕ ಕ್ಲಿನಿಕಲ್ ಪರೀಕ್ಷೆಯನ್ನು ನಡೆಸಲಿದೆ.

ಈ ವಿಷಯವನ್ನು ಆರ್‌ಜಿಯುಹೆಚ್ಎಸ್, ಹೈಕೋರ್ಟ್ ಗೆ ತಿಳಿಸಿರುವ ಹಿನ್ನೆಲೆಯಲ್ಲಿ ಸಂಯೋಜಿತ ಕಾಲೇಜುಗಳ ವಿಧ್ಯಾರ್ಥಿಗಳಿಗೆ ಈ ಹಿಂದೆ ನಡೆಸಲಾಗಿದ್ದ ಪ್ರಾಯೋಗಿಕ ಪರೀಕ್ಷೆಯ ಅಂಕಗಳನ್ನು ಹೈಕೋರ್ಟ್ ರದ್ದುಪಡಿಸಿದೆ.

ವಿಶ್ವವಿದ್ಯಾಲಯ ನಡೆಸಿರುವ ಪ್ರಾಯೋಗಿಕ ಪರೀಕ್ಷೆಯು ವಿಶ್ವವಿದ್ಯಾಲಯ ಮಾರ್ಗಸೂಚಿಗಳಿಗೆ ವಿರುದ್ದವಾಗಿದೆ ಎಂದು ರಾಯಚೂರಿನ ಬಸವರಾಜ ಇಟಗಿ ಮತ್ತು ಚಿಕ್ಕಬಳ್ಳಾಪುರದ ಜಿ.ಕೈಲಾಸ್ ತಿಳಿಸಿದರು. ಹಾಗೂ ಹಲವು ವಿಧ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ, ನ್ಯಾಯ ಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ಮಾಡಿತ್ತು. ಅರ್ಜಿದಾರ ವಿಧ್ಯಾರ್ಥಿಗಳಿಗೆ ಮೂರು ವಾರದೊಳಗೆ ಹೊಸದಾಗಿ ಪ್ರಾಯೋಗಿಕ ಪರೀಕ್ಷೆ ನಡೆಸುವುದಾಗಿ ಆರ್ ಜಿಯುಎಚ್ಎಸ್, ಮುಚ್ಚಳಿಕೆ ನೀಡಿದನ್ನು ಪರಿಗಣಿಸಿ ಕೋರ್ಟ್ ಈ ಆದೇಶ ಮಾಡಿದೆ.

 

- Advertisement -

Latest Posts

Don't Miss