Saturday, April 19, 2025

Latest Posts

ಆದಿತ್ಯ ತಾರೆ ಗಾಯಾಳು; ರಣಜಿಯಿಂದ ಹೊರಕ್ಕೆ..!

- Advertisement -

 

ಉತ್ತರಖಾಂಡ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಕೈಬೆರಳಿಗೆ ಏಟು ಮಾಡಿಕೊಂಡ ಮುಂಬೈ ತಂಡದ ವಿಕೆಟ್ ಕೀಪರ್ ಆದಿತ್ಯ ತಾರೆ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಇತರ ಸ್ಥಾನಕ್ಕೆ ಹೆಚ್ವಿವರಿ ಕೀಪರ್ ಆಗಿ ಪ್ರಸಾದ್ ಪವಾರ್ ಅವರನ್ನು ಆರಿಸಲಾಗಿದೆ. ಆದರೆ ತಂಡದಲ್ಲಿರುವ ದ್ವಿತೀಯ ಕೀಪರ್ ಹಾರ್ದಿಕ್ ತಮೋರೆ ಸೆಮಿಫೈನಲ್ಸ್ ನಲ್ಲಿ ಕೀಪಿಂಗ್ ಹೊಣೆಗಾರಿಕೆ ನಿಭಾಯಿಸಲಿದ್ದಾರೆ.

ಶನಿವಾರ ಸಂಜೆ ಬೆಂಗಳೂರಿನಿಂದ ಮುಂಬಯಿಗೆ ವಾಪಸಾಗಿರುವ ಆದಿತ್ಯ ತಾರೆ ಅಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ. 2015-16ರಲ್ಲಿ ಮುಬೈ ಕೊನೆಯ ಸಲ ರಣಜಿ ಟ್ರೋಫಿ ಚಾಂಪಿಯನ್ ಆದಾಗ ತಾರೆ ತಂಡದ ನಾಯಾಕರಾಗಿದ್ದರು.

ಪಂದ್ಯಾವಳಿಯ ನಿರ್ಣಾಯಕ ಹಂತದಲ್ಲಿ ಹೊರಬಿದ್ದಿರುವುದು ನಿಜಕ್ಕೂ ಬೇಸರದ ಸಂಗತಿ. ನನಗೆ ಬ್ಯಾಟ್ ನ ಗ್ರಿಪ್ ಸಾಧ್ಯವಾಗುತ್ತಿಲ್ಲ. ಹಾರ್ದಿಕ್ ತವೋರೆ ಕೂಡ ಉತ್ತಮ ಕೀಪರ್‌. ಒತ್ತಡವನ್ನು ನಿಭಾಯಿಸವ ಸಾಮರ್ಥ್ಯ ಅವರಲ್ಲಿದೆ ಎಂದು ಆದಿತ್ಯ ತಾರೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಲ್ಲಿ ಹೇಳಿದರು.

ಮುಂಬೈ- ಉತ್ತರ ಪ್ರದೇಶ ನಡುವಿನ ರಣಜಿ ಸೆಮಿಫೈನಲ್ ಮಂಗಳವಾರ ಆರಂಭವಾಗಲಿದೆ. ಇನ್ನೊಂದು ಸೆಮಿಫೈನಲ್ ನಲ್ಲಿ ಬಂಗಾಲ- ಮಧ್ಯಪ್ರದೇಶ ಮುಖಾಮುಖಿ ಆಗಲಿದೆ.

 

- Advertisement -

Latest Posts

Don't Miss