Thursday, November 27, 2025

Latest Posts

ಸಿಗರೇಟ್ ಮೇಲೂ ಎಚ್ಚರಿಕೆ ಸಂದೇಶ ಮುದ್ರಣ..!

- Advertisement -

ಕೆನಡಾ: ಸಿಗರೇಟ್ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸಿಗರೇಟ್ ಪ್ಯಾಕ್ ಮೇಲೆ ಎಚ್ಚರಿಕೆ ಸಂದೇಶ ಸಾಮಾನ್ಯ. ಆದರೆ ಕೆನಡಾ ದೇಶ ಪ್ರತಿ ಸಿಗರೇಟ್ ಮೇಲೂ ಎಚ್ಚರಿಕೆ ಸಂದೇಶ ಮುದ್ರಣಕ್ಕೆ ಮುಂದಾಗಿದೆ.

ಈ ರೀತಿ ಮಾಡಿದ ವಿಶ್ವದ ಮೊದಲ ದೇಶ ಎನಿಸಿಕೊಂಡಿದೆ. ಕೆನಡಾದಲ್ಲಿ ಸದ್ಯ 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇ.11 ಯುವಕರು ಹಾಗೂ 15 ರಿಂದ 19 ವರ್ಷ ವಯೋಮಿತಿಯ ಶೇ.4 ರಷ್ಟು ಯುವಕರು ಸಿಗರೇಟ್ ಸೇವನೆ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಉತ್ಪನ್ನಗಳ ಮೇಲೆ ಅವುಗಳ ದುಷ್ಪರಿಣಾಮಗಳ ಮಾಹಿತಿಯನ್ನು ಮುದ್ರಿಸುವ ಮೂಲಕ ಜಾಗೃತಿ ಮೂಡಿಸುವ ಹೊಸ ಕ್ರಮಕ್ಕೆ ಕೆನಡಾ ಮುಂದಾಗಿದೆ.

‘ಪ್ರತಿ ಪಫ್ ನಲ್ಲಿಯೂ ವಿಷ’ ಎಂದು ಪ್ರತಿ ಸಿಗರೇಟಿನ ಮೇಲೆ ಬರೆಯಲಾಗುವುದು. ಸಿಗರೇಟಿನ ಪ್ಯಾಕೇಟ್ ಮೇಲೆ ಸಿಗರೇಟ್ ಸೇವನೆಯಿಂದಾಗುವ ಹೊಟ್ಟೆಯ ಕ್ಯಾನ್ಸರ್, ಡಯಾಬಿಟೀಸ್, ಹೃದಯ ಸಂಬಂಧಿ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಬಗ್ಗೆ ವಿವರವಾದ ಮಾಹಿತಿ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Latest Posts

Don't Miss