ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಯುವಕನ ಸಾವು..!

ತಂಗಿ ಮದುವೆ ಸಿದ್ದತೆಯಲ್ಲಿದ್ದ 25 ವರ್ಷದ ಯುವಕ ರವಿ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ.

ಶಿಡ್ಲಘಟ್ಟ ತಾಲ್ಲೂಕಿನ ಸದ್ದಹಳ್ಳಿ ಗ್ರಾಮದ ನಾರಾಯಣಸ್ವಾಮಿ ಎಂಬುವವರ ಮಗ ರವಿ, ಅಡಿಗೆ ಕೆಲಸ ಮಾಡಿಕೊಂಡು ಕುಟುಂಬಾಧಾರಿತವಾಗಿದ್ದ. ಗುರುವಾರ ತಂಗಿಯ ಮದುವೆ ಕಾರ್ಯಕ್ಕೆ ತಯಾರಿಯಲ್ಲಿದ್ದ ರವಿ ಸೋಮವಾರ ಶಿಡ್ಲಘಟ್ಟ ನಗರಕ್ಕೆ ಬಂದು ಸ್ವಗ್ರಾಮಕ್ಕೆ ದ್ವಿಚಕ್ರವಾಹನದಲ್ಲಿ ತೆರಳುವಾಗ ಟ್ರಾಕ್ಟರ್ ಬಡಿದು ಹೆಚ್ಚು ಗಾಯಗೊಂಡಿದೆ.

ಚಿಕಿತ್ಸೆಗಾಗಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ ರವಿಯ ಪರಿಸ್ಥಿತಿ ಚಿಂತಾಚನಕವಾದ್ದರಿಂದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿ ಬೆಡ್ ಸಿಗದೆ ನಂತರ ನಿಮಾನ್ಸ್ ಆಸ್ಪತ್ರೆಗೆ ತೆರಳಿದರು. ಅಲ್ಲಿಯೂ ಸಹ ಬೆಡ್ ಕಾಲಿ ಇಲ್ಲದೆ ಪರದಾಡುವ ಸ್ಥಿತಿ ಎದುರಾಗಿ ಪ್ರಾಣ ಕಳೆದುಕೊಂಡಿದ್ದಾನೆ.

ಇಡೀ ಕುಟುಂಬದ ನಿರ್ವಹಣೆ ಜವಾಬ್ದಾರಿಯನ್ನು ರವಿ ನೋಡಿಕೊಳ್ಳುತ್ತಿದ್ದ. ಆದರೆ ಇದೀಗ ಆತ ಸಾವನ್ನಪ್ಪಿದ್ದು, ತನ್ನ ಕುಟುಂಬ ದಿಕ್ಕುತೊಚದಂತಾಗಿ ಬೀದಿಪಾಲಾಗಿದೆ.

injured

 

About The Author