ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇಂದು ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟನೆ ಮಾಡಿದ್ದಾರೆ. ಆದ್ರೇ.. ಇದಕ್ಕೆ ಜಾಗಕೊಟ್ಟಿದ್ದು, ಜಾರಿಗೆ ತಂದಿದ್ದು ನಾವು ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇವತ್ತು ಅಂಬೇಡ್ಕರ್ ವಿವಿ ಉದ್ಘಾಟನೆ ಮಾಡ್ತಿದ್ದಾರೆ. ಇದನ್ನ ಜಾರಿಗೆ ತಂದಿದ್ದು ಯಾರು, ನಾವು. ನಮ್ಮ ಅವಧಿಯಲ್ಲೇ ಜಮೀನುಕೊಟ್ಟು ತಂದಿದ್ದು. ಈಗ ಅದನ್ನ ಉದ್ಘಾಟನೆ ಮಾಡ್ತಿದ್ದಾರೆ ಎಂದರು.
ಮೈಸೂರು ಬೆಂಗಳೂರು ಅಷ್ಟಪಥದ ರಸ್ತೆ ಮಾಡಿದ್ದು ಯಾರು? ನಾನು ನಾನು ಅಂತ ಪ್ರತಾಪ್ ಸಿಂಹ ಓಡಾಡ್ತಿದ್ದಾರೆ. ಪ್ರಾಜೆಕ್ಟ್ ಅಪ್ರೂವ್ ಮಾಡಿದ್ದು ಆಸ್ಕರ್ ಫರ್ನಾಂಡಿಸ್ ಅವರಾಗಿದ್ದಾರೆ. ಮಹದೇವಪ್ಪ ಕಾಳಜಿಯಿಂದ ರಸ್ತೆ ಆಗ್ತಿದೆ. ಈಗ ಪ್ರತಾಪ್ ಸಿಂಹ ನನ್ನದು ಅಂತ ಓಡಾಡ್ತಿದ್ದಾರೆ ಎಂಬುದಾಗಿ ವಾಗ್ದಾಳಿ ನಡೆಸಿದರು.




