ಪಂಚಮಸಾಲಿ ಮೀಸಲಾತಿ ಹೋರಾಟ ಹಿನ್ನೆಲೆ: ಸ್ವಾಮೀಜಿಗಳ ಜೊತೆ ಸಂಧಾನ ಮಾತುಕತೆಗೆ ಮುಂದಾದ ಸಿಎಂ ಬಸವರಾಜ್ ಬೊಮ್ಮಾಯಿ

ಬೆಂಗಳೂರು: ಪಂಚಮಸಾಲಿ ಮೀಸಲಾತಿ ಹೋರಾಟ ಹಿನ್ನೆಲೆಯಲ್ಲಿ, ಜಯ ಮೃತ್ಯುಂಜಯ ಸ್ವಾಮೀಜಿಗಳು ಜೂನ್ 23ರಂದು ಧರಣಿಗೆ ಮುಂದಾಗಿದ್ದರು. ಈ ಹಿನ್ನಲೆಯಲ್ಲಿ, ಸಿಎಂ ಬಸವರಾಜ ಬೊಮ್ಮಾಯಿಯವರು, ಸ್ವಾಮೀಜಿಗಳ ಜೊತೆ ಸಂಧಾನ ಮಾತುಕತೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಸಿಎಂ ಬಸವರಾಜ್ ಬೊಮ್ಮಾಯಿಯವರು ಸಂಪುಟ ಸಹದ್ಯೋಗಿ ಸಿ.ಸಿ ಪಾಟೀಲ್ ಮೂಲಕ ಸ್ವಾಮೀಜಿಯ ಜೊತೆಗೆ ಸಂಧಾನ ಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಜಯಮೃತ್ಯುಂಜಯ ಸ್ವಾಮೀಜಿ ಜೊತೆ ಸಂಧಾನ ಮಾತುಕತೆ ನಡೆಸುವಂತೆ ಸಿಎಂ ಸೂಚನೆ ಹಿನ್ನಲೆಯಲ್ಲಿ, ಸಿಸಿ ಪಾಟೀಲ್ ಸಂಧಾನಕ್ಕೆ ಇಳಿದಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಜಯ ಮೃತ್ಯುಂಜಯ ಶ್ರೀಗಳಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿರುವ ಸಿ.ಸಿ ಪಾಟೀಲ್, ರಾತ್ರಿ ಭೇಟಿಯಾಗಬೇಕಿದೆ ಎಂದು ಸ್ವಾಮೀಜಿಗಳಿಗೆ ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಸಚಿವರ ಮನವಿಗೆ ಸ್ಪಷ್ಟವಾಗಿ ಏನನ್ನೂ ಸ್ವಾಮೀಜಿ ಹೇಳಿಲ್ಲ ಎಂಬುದಾಗಿ ತಿಳಿದು ಬಂದಿದೆ.

ಈ ಹಿನ್ನಲೆಯಲ್ಲಿ ಇದೀಗ ಸಂಧಾನಕ್ಕೆ ಹೋಗಬೇಕೋ ಬೇಡವೋ ಎಂಬ ಗೊಂದಲದಲ್ಲಿ ಸ್ವಾಮೀಜಿಯವರು ಇದ್ದಾರೆ ಎನ್ನಲಾಗಿದೆ.

ಅಂದಹಾಗೇ, ಮೀಸಲಾತಿಗಾಗಿ ಒತ್ತಾಯಿಸಿ ಶಿಗ್ಗಾವಿಯ ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸದ ಮುಂದೆ ಧರಣಿಗೆ ಸ್ವಾಮೀಜಿ ಮುಂದಾಗಿದ್ದರು. ಜೂನ್ 23ರಂದು ಧರಣಿಗೆ ಜಯಮೃತ್ಯುಂಜಯ ಸ್ವಾಮೀಜಿ ಮುಂದಾಗಿದ್ದರು.

About The Author