ಸಿದ್ಧರಾಮಯ್ಯ ಅವಧಿಯಲ್ಲಿ ಪಠ್ಯಪುಸ್ತಕದಲ್ಲಿ 150 ತಪ್ಪು ಆಗಿತ್ತು – ಸಚಿವ ಆರ್ ಅಶೋಕ್

ಬೆಂಗಳೂರು: ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದ ಪಠ್ಯಪುಸ್ತಕ ಪರಿಷ್ಕರಣೆಯ ಏಳೆಂಟು ತಪ್ಪುಗಳನ್ನೇ ದೊಡ್ಡ ತಪ್ಪು ಎಂಬುದಾಗಿ ಕಾಂಗ್ರೆಸ್ ನಾಯಕರು ಬಿಂಬಿಸುತ್ತಿದ್ದಾರೆ. ಆದ್ರೇ ಸಿದ್ಧರಾಮಯ್ಯ ಸರ್ಕಾರದ ಸಂದರ್ಭದಲ್ಲಿನ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ 150 ತಪ್ಪು ಆಗಿತ್ತು ಎಂಬುದಾಗಿ ಕಂದಾಯ ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದಂತ ಅವರು, ಭಾರತ ನಮ್ಮ ಹೆಮ್ಮೆ ಎಂದು ಆರನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಸೇರಿಸಿದ್ದೇವೆ. ಇದ್ರಲ್ಲಿ ತಪ್ಪೇನಿದೆ? ಎಂದರು.

ಕೆ ಎಸ್ ನರಸಿಂಹಸ್ವಾಮಿರವರ ಭಾರತೀಯತೆ ಕವನವನ್ನ ಸೇರಿಸಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರಾದ ನಿಟ್ಟೂರು ಶ್ರೀನಿವಾಸರಾಯರ ಪಾಠ ಮರು ಸೇರ್ಪಡೆ ಮಾಡಿದ್ದೇವೆ. ಚೆನ್ನಾಭೈರಾದೇವಿ ಕನ್ನಡ ರಾಣಿಯ ಬಗ್ಗೆ ಪಠ್ಯ ಸೇರ್ಪಡೆ ಮಾಡಲಾಗಿದೆ. ಏಣಗಿ ಬಾಳಪ್ಪನವರ ಜೀವನ ಪರಿಚಯವನ್ನ ಮರು ಮರು ಸೇರ್ಪಡೆ ಮಾಡಿದ್ದೇವೆ. ವಿವೇಕಾನಂದರ ಜನ್ಮದಿನದ ಕುರಿತ ಪಠ್ಯ ಸೇರ್ಪಡೆ ಮಾಡಲಾಗಿದೆ. ಎಸ್ ಎಲ್ ಭೈರಪ್ಪ ಬರೆದ ಯಾವುದೇ ಪಠ್ಯ ಪುಸ್ತಕ ಇರಲಿಲ್ಲ. 9ನೇ ತರಗತಿಯ ಪಠ್ಯದಲ್ಲಿ ನಾನು ಕಂಡಂತೆ ಬಿಜಿಎಲ್ ಸ್ವಾಮಿ ಎಂಬ ಬರಹವನ್ನ ಸೇರಿಸಿದ್ದೇವೆ ಎಂದರು.

ಸನಾತನ ಧರ್ಮ ಪಾಠವನ್ನ 8ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಸೇರಿಸಿದ್ದೇವೆ. ಮಂಜೇಶ್ವರ್ ಗೋವಿಂದ ಪೈ ಬರಹ ಮರು ಸೇರ್ಪಡೆ ಮಾಡಿದ್ದೇವೆ. ಪಂಜೆ ಮಂಗೇಶರಾಯರ ಸೀಗಡಿ ಯಾಕೆ ಒಣಗಲಿಲ್ಲ ಪಠ್ಯ ಸೇರ್ಪಡೆ ಮಾಡಲಾಗಿದೆ. ಬರಗೂರು ಸಮಿತಿಯವರು ಮೊಘಲರು, ದೆಹಲಿ ಸುಲ್ತಾನರ ಬಗ್ಗೆ ವಿಷಯ ಹೆಚ್ಚಿತ್ತು. ನಮ್ಮ‌ ನೆಲದ ರಾಜರ ಪರಿಚಯ ಹಿಂದಿನ ಪಠ್ಯಪುಸ್ತಕಗಳಲ್ಲಿ ಇರಲಿಲ್ಲ ಎಂದರು.

ಕಾಂಗ್ರೆಸ್ ಅವಧಿಯಲ್ಲಿ ಪಠ್ಯ ಪುಸ್ತಕಗಳಲ್ಲಿ 150 ತಪ್ಪು ಆಗಿತ್ತು. ನಮ್ಮ ಕಾಲದಲ್ಲಿ ಏಳೆಂಟು ತಪ್ಪು ಆಗಿದೆ. ಅದನ್ನ ಪರಿಷ್ಕರಣೆ ಮಾಡಿ ಇನ್ನೊಂದು ವಾರದಲ್ಲಿ ಕಳುಹಿಸಿ ಕೊಟ್ಟಿದ್ದೇವೆ. ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ತಪ್ಪು ಸರಿಪಡಿಸಿದ ಬಳಿಕ ನೀಡಲಾಗುತ್ತದೆ ಎಂದರು.

About The Author