Thursday, December 26, 2024

Latest Posts

“ಕ್ರಾಂತಿ”ಗೆ ಡಿ-ಫ್ಯಾನ್ಸ್ ಪವರ್‌ಫುಲ್ ಪ್ರಚಾರ..!

- Advertisement -

ಚಾಲೆಂಜಿAಗ್ ಸ್ಟಾರ್ ದರ್ಶನ್ ನಟಿಸ್ತಿರೋ ಬಹುನಿರೀಕ್ಷಿತ ಸಿನಿಮಾ ಕ್ರಾಂತಿ. ರಾಬರ್ಟ್ ಸಿನಿಮಾ ಬಳಿಕ ಡಿ-ಭಕ್ತಗಣ ಕಾತುರದಿಂದ ಎದುರುನೋಡ್ತಿರೋ ಸಿನಿಮಾ ಈ ಕ್ರಾಂತಿಯಾಗಿದೆ. ಹೊಸದೊಂದು ಕಥೆ, ಹೊಸ ಗೆಟಪ್‌ನಲ್ಲಿ ಅಭಿಮಾನಿಗಳ ಮುಂದೆ ಎಂಟ್ರಿ ಕೊಡಲು ಸಜ್ಜಾಗಿರೋ ಡಿ-ಬಾಸ್ ಸಹ ಈ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸದ್ಯ ಕ್ರಾಂತಿ ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿ ಜರುಗುತಿದ್ದು, ಇದೀಗ ಚಿತ್ರೀಕರಣಕ್ಕಾಗಿ ಸದ್ದಿಲ್ಲದೇ ಇಡೀ ಟೀಂ ವಿದೇಶಕ್ಕೆ ಹಾರಿದೆ.

ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೆ ಈ ಚಿತ್ರದಲ್ಲಿ ದರ್ಶನ್‌ಗೆ ಜೋಡಿಯಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಈ ಜೋಡಿ ಮತ್ತೊಂದು ಸೆನ್ಸೇಶನ್ ಕ್ರಿಯೇಟ್ ಮಾಡೋದು ಪಕ್ಕಾ ಅಂತಿದೆ ಗಾಂಧಿನಗರ. ವಿ.ಹರಿಕೃಷ್ಣ ಡೈರೆಕ್ಷನ್ ಈ ಚಿತ್ರಕ್ಕಿದ್ದು, ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಸುಮಲತಾ ಅಂಬರೀಶ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ವಿಶೇಷ ಅಂದ್ರೆ ಡೈರೆಕ್ಷನ್ ಜೊತೆಗೆ ವಿ.ಹರಿಕೃಷ್ಣ ಅವ್ರ ಮ್ಯೂಸಿಕ್ ಕೂಡ ಈ ಚಿತ್ರದಲ್ಲಿರಲಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಂತೂ ಕ್ರಾಂತಿಯ ಪ್ರಚಾರ ಭರದಿಂದ ಸಾಗ್ತಿದ್ದು. ಪ್ರತೀ ಬಾರಿ ನಿಮಗೆಲ್ರಿಗೂ ಗೊತ್ತಿರೋ ಹಾಗೇ ದರ್ಶನ್ ಸಿನಿಮಾ ರಿಲೀಸಾಗ್ತಿದೆ ಅಂದ್ರೆ ಮೀಡಿಯಾದಿಂದ ಹಿಡಿದೂ ಅಭಿಮಾನಿಗಳ ವಲಯದಲ್ಲಿ ಅದ್ಧೂರಿ ಪ್ರಚಾರವಿರ್ತಿತ್ತು. ಇದೀಗ ಮೊದಲ ಬಾರಿಗೆ ಮೀಡಿಯಾ ಪ್ರಚಾರವಿಲ್ಲದೇ ಅಭಿಮಾನಿಗಳ ಅದ್ಧೂರಿ ಪ್ರಚಾರದ ಮೂಲಕ ರಿಲೀಸಾಗ್ತಿರೋ ಮೊದಲ ಸಿನಿಮಾ ಇದಾಗಿದೆ.

ಇನ್ನು ಡಿ-ಫ್ಯಾನ್ಸ್ ಕ್ರಾಂತಿಯ ಪ್ರಚಾರ ಜೊರಾಗೇ ನಡೀತಿದ್ದು, ರಾಜ್ಯದ ಮೂಲೆ ಮೂಲೆಗಳಲ್ಲಿ ಕ್ರಾಂತಿ ಚಿತ್ರದ ಪೋಸ್ಟರ್ ಪ್ರಮೋಷನ್ ಮಾಡ್ತಿದ್ದಾರೆ. ನಟ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ 100 ದಿನ ಯಶಸ್ವಿಯಾಗಿ ಪ್ರದರ್ಶನವಾಗಲಿ ಎಂದು ಆರೈಸಿ ಸಿನಿಮಾ ಪ್ರಮೋಷನ್ ಗೆ ಡಿ ಬಾಸ್ ಫ್ಯಾನ್ಸ್ ಗಳೇ ಫೀಲ್ಡ್ ಗೆ ಇಳಿದಿದ್ದಾರೆ. .

ಡಿ ರೈಡರ್ಸ್ ಅಭಿಮಾನಿಗಳು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕ್ರಾಂತಿ ಸಿನಿಮಾದ ಪ್ರಮೋಷನ್ ಗಾಗಿ ನಟ ದರ್ಶನ್ ಪೋಸ್ಟರ್ ಗೆ ತೆಂಗಿನ ಕಾಯಿ ಹೊಡೆದು ಕರ್ಪೂರ ಹಚ್ಚಿ ಆರತಿ ಬೆಳಗಿದ್ದಾರೆ. ನಂತರ ಆಟೋಗಳಿಗೆ ಪೋಸ್ಟರ್ ಗಳಿಗೆ ಅಂಟಿಸಲಾಯಿತು. ಒಟ್ಟಿನಲ್ಲಿ ಅಭಿಮಾನಿಗಳೇ ತಮ್ಮ‌ನೆಚ್ಚಿನ ನಟನ ಸಿನಿಮಾವನ್ನ ಪ್ರಮೋಟ್ ಮಾಡಲು ಸಿದ್ದಗೊಂಡಿದ್ದಾರೆ.

- Advertisement -

Latest Posts

Don't Miss