ಅಮಸೆತ್ಲೆವೀನ್ (ನೆದರ್‍ಲ್ಯಾಂಡ್): ಇಂಗ್ಲೆಂಡ್ ವಿರುದ್ಧ ಡ್ರಾ ಸಾಸಿ ತಾಕತ್ತು ಪ್ರದರ್ಶಿಸಿದ್ದ ಭಾರತ ವನಿತೆಯರ ಹಾಕಿ ತಂಡ ಇಂದು ಚೀನಾ ವಿರುದ್ಧ ಸೆಣಸಲಿದೆ.
ನಾಯಕಿ ಸವಿತಾ ನೇತೃತ್ವದ ಭಾರತ ತಂಡ ಮೊನ್ನೆ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಅತ್ಯುತ್ತಮ ರಕ್ಷಣಾತ್ಮಕ ಆಟವಾಡಿ ಗಮನ ಸೆಳದಿತ್ತು. ದಾಳಿ ಮಾಡುವ ವಿಭಾಗದಲ್ಲಿ ಸುಧಾರಿಸಿಕೊಂಡು ಚೀನಾ ವಿರುದ್ಧ ಮೊದಲ ಗೆಲುವು ದಾಖಲಿಸಬೇಕಿದೆ.
ಉಪನಾಯಕಿ ಎಕ್ಕಾ, ನಿಕ್ಕಿ ಪ್ರಧಾನ್ ಗುರ್ಜಿತ್ ಕೌರ್ ಮತ್ತು ಉದೀತಾ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.ನಾಯಕಿ ಹಾಗೂ ಗೋಲ್ ಕೀಪರ್ ಸವಿತಾ ಸೊಗಸಾಗಿ ರಕ್ಷಣೆ ಮಾಡಿ ಎದುರಾಳಿ ತಂಡದ ದಾಳಿಯನ್ನು ತಡೆದರು.
ಇನ್ನು ಫಾರ್ವರ್ಡ್ ವಿಭಾಗದಲ್ಲಿ ಗೋಲು ಹೊಡೆಯಲು ಸಾಕಷ್ಟು ಅವಕಾಶವಿತ್ತು ಆದರೆ ಅದನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ. 56ನೇ ನಿಮಿಷದಲ್ಲಿ ಶರ್ಮಿಳಾ ದೇವಿ ಗೋಲಾಗಿ ಪರಿವರ್ತಿಸುವಲ್ಲಿ ಎಡವಿದರು.
ಇನ್ನು ಚೀನಾ ತಂಡ ತನ್ನ ಮೊದಲ ಪಂದ್ಯದಲ್ಲಿ 2-2 ಗೋಲುಗಳಿಂದ ಡ್ರಾ ಮಾಡಿಕೊಂಡಿತ್ತು. ವಿಶ್ವ ರಾಂಕಿಂಗ್‍ನಲ್ಲಿ 13ನೇ ಸ್ಥಾನ ಪಡೆದಿರುವ ಚೀನಾ ಎದರು ಭಾರತ ಗೆಲ್ಲುವ ನೆಚ್ಚಿನ ತಂಡವಾಗಿದೆ.




