ಹೆಬ್ಬಾಳ ಬಳಿಯ ಟ್ರಾಫಿಕ್ ನಿಯಂತ್ರಣಕ್ಕೆ ಮುಂದಾದ ಟ್ರಾಫಿಕ್ ಪೊಲೀಸರು, ಬಿಬಿಎಂಪಿ!

ಬೆಂಗಳೂರು: ಹೆಬ್ಬಾಳ ಬಳಿ ಟ್ರಾಫಿಕ್ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರು ಮತ್ತು ಬಿಬಿಎಂಪಿ ಮುಂದಾಗಿದೆ.

ಈ ಕುರಿತು ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾತನಾಡಿ, ನಗರದ ಕನಿಷ್ಠ 10 ಟ್ರಾಫಿಕ್ ಜಂಕ್ಷನ್‍ಗಳ ಅಧ್ಯಯನ ಮಾಡಲಾಗಿದೆ. ಬೆಂಗಳೂರಿನ ಉತ್ತರ ಭಾಗದ ಹೆಬ್ಬಾಳದ ಫ್ಲೈ ಓವರ್‍ನಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಕಂಡುಬರುತ್ತಿದೆ. ಈ ವರೆಗೆ ಎರಡು ಅಧ್ಯಯನ ಮಾಡಲಾಗಿದೆ. ವಾಹನ ದಟ್ಟಣೆಯ ಎಷ್ಟು, ಪೀಕ್ ಹವರ್ ಎಷ್ಟು, ಹೊರ ರಾಜ್ಯದಿಂದ ಎಷ್ಟು ವೆಹಿಕಲ್ ಬರುತ್ತೆ ಅನ್ನೊ ಬಗ್ಗೆ ಅಧ್ಯಯನ ಮಾಡಲಾಗಿದೆ ಎಂದರು.

ಸಂಚಾರಿ ತಜ್ಞರು ಈ ಅಧ್ಯಯನ ಮಾಡಿದ್ದಾರೆ. ನೇರವಾಗಿ ಬರುವ ವೆಹಿಕಲ್‍ಗಳು ನಗರ ಸಂಚಾರ ಮಾಡ್ತಿವೆ. ಫ್ಲೈ ಓವರ್ ಮೇಲೆ 45,000 ವೆಹಿಕಲ್‍ಗಳು ಸಂಚಾರ ಮಾಡುತ್ತಿವೆ. ಕಳೆದ ಮೂರು ದಿನಗಳಿಂದ ಸೂಚನಾ ಫಲಕ ನೀಡಲಾಗಿದೆ. ಸರ್ವಿಸ್ ರಸ್ತೆಯಲ್ಲಿ ಬರುವ ವೆಹಿಕಲ್‍ಗಳು ಲೂಪ್ ಮುಖಾಂತರ ಹೋಗಿ ನಗರ ಪ್ರವೇಶ ಮಾಡಬಹುದು. ಯಲಹಂಕ, ಬ್ಯಾಟರಾಯನಪುರ, ಕೊಡಿಗೇಹಳ್ಳಿ ಅಮೃತಹಳ್ಳಿ ಕಡೆಯಿಂದ ಬರುವವರು ಲೂಪ್ ಫ್ಲೈ ಓವರ್ ಬಳಿ ತೆಗೆದುಕೊಂಡು ನಗರ ಪ್ರವೇಶ ಮಾಡಬೇಕು ಎಂದು ತಿಳಿಸಿದರು.

ಆಂಧ್ರ ಪ್ರದೇಶದಿಂದ ಬರುವ ಬಸ್‍ಗಳು ಬೇರೆ ಸ್ಟಾಪ್‍ಗೆ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಆಟೊ ಸ್ಟ್ಯಾಂಡ್ ಕೂಡ ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ಪ್ರಾಯೋಗಿಕವಾಗಿ ಶುಕ್ರವಾರದಿಂದ ಜಾರಿಗೆ ತರಲಾಗುತ್ತೆ. ಅಧ್ಯಯಯನದ ಮೂಲಕ ಕಂಡು ಬಂದಿರೋದು 90% ಜನರಿಗೆ ಅನುಕೂಲವಾಗುತ್ತೆ. 10% ಜನರಿಗೆ ಅನಾನುಕೂಲವಾಗುತ್ತೆ. ಹೆಬ್ಬಾಳ ಬಳಿ ಟ್ರಾಫಿಕ್ ಕಂಟ್ರೋಲ್ ಮಾಡಲು ಇದು ಅವಶ್ಯಕವಾಗಿದೆ ಎಂದು ಮಾಹಿತಿ ನೀಡಿದರು.

About The Author