Monday, October 6, 2025

Latest Posts

ರೀಲಿಸ್‌ಗೂ ಮೊದಲೇ ಲೀಕ್ ಆಯ್ತು ಪೋನ್ನಿಯನ್ ಸೆಲ್ವನ್ ಚಿತ್ರದ ಟೀಸರ್

- Advertisement -

ಪೊನ್ನಿಯಿನ್ ಸೆಲ್ವನ್ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ನಿರ್ದೇಶಕ ಮಣಿರತ್ನಂ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇಂದು ಸಂಜೆ ಆರು ಗಂಟೆಗೆ  ಸಂಜೆ 6 ಗಂಟೆಗೆ ಚಿಯಾನ್ ವಿಕ್ರಮ್, ಐಶ್ವರ್ಯ ರೈ ಬಚ್ಚನ್ ಮತ್ತು ತ್ರಿಶಾ  ಚಿತ್ರದ  ಮೆಗಾ ಟೀಸರ್ ಅನಾವರಣಗೊಳ್ಳಬೇಕಿತ್ತು. ವಿಕ್ರಮ್ ಅವರ ಅನಾರೋಗ್ಯದ ಕಾರಣದಿಂದ ಟೀಸರ್ ಲಾಂಚ್ ಅನ್ನು ಮಿಸ್ ನೀಡಬೇಕಾಗಿದ್ದರೆ,  ಐಶ್ವರ್ಯ ಮತ್ತು ತ್ರಿಷಾ ಈ ಒಂದು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಆದರೆ,  ಬಿಡುಗಡೆಗೆ ಒಂದು ಗಂಟೆ ಮೊದಲು, ಪೊನ್ನಿಯಿನ್ ಸೆಲ್ವನ್ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದ್ದು,  ಟೀಸರ್ ಈಗಾಗಲೇ  ವೈರಲ್ ಆಗಿದೆ.   ಪೊನ್ನಿಯಿನ್ ಸೆಲ್ವನ್ ಅವರ ಟೀಸರ್ ಅನ್ನು ಜುಲೈ 8 ರಂದು ಮೆಗಾ ಈವೆಂಟ್‌ನಲ್ಲಿ ಚಿತ್ರತಂಡ ಮತ್ತು ತಯಾರಕರು ಚೆನ್ನೈನಲ್ಲಿ ಅನಾವರಣಗೊಳಿಸಬೇಕಿತ್ತು. ಆದರೆ, ಅನಾವರಣಗೊಳಿಸುವ ಕೆಲ ನಿಮಿಷಗಳ ಮೊದಲೇ  ಲೀಕ್ ಆಗಿದೆ.

ಪೊನ್ನಿಯಿನ್ ಸೆಲ್ವನ್ ಟೀಸರ್ ಅನ್ನು ಬಹು ಗಣ್ಯರು ಬಿಡುಗಡೆ ಮಾಡಲಿದ್ದಾರೆ. ಚಿತ್ರದ ಮೊದಲ ಭಾಗವು ಸೆಪ್ಟೆಂಬರ್ 30 ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸದ್ಯ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಪೊನ್ನಿಯಿನ್ ಸೆಲ್ವನ್ ನಿರ್ಮಾಪಕರು ಜುಲೈ 8 ರಂದು ಚೆನ್ನೈನಲ್ಲಿ ನಡೆಯುವ ಮೆಗಾ ಈವೆಂಟ್‌ನಲ್ಲಿ ಟೀಸರ್ ಅನ್ನು ಅನಾವರಣಗೊಳಿಸಲಿದ್ದಾರೆ. ಅದೇ ಸಮಯದಲ್ಲಿ, ಟೀಸರ್‌ನ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಆವೃತ್ತಿಗಳನ್ನು ಯೂಟ್ಯೂಬ್‌ನಲ್ಲಿ ಸೂರ್ಯ, ಮಹೇಶ್ ಬಾಬು, ಮೋಹನ್ ಲಾಲ್ ರಕ್ಷಿತ್ ಶೆಟ್ಟಿ ಮತ್ತು ಅಮಿತಾಬ್ ಬಚ್ಚನ್ ಬಿಡುಗಡೆ ಮಾಡಲಿದ್ದಾರೆ.

 

 

- Advertisement -

Latest Posts

Don't Miss