ಅಗ್ನಪಥ್ ಯೋಜನೆ: ನಾಲ್ಕು ವರ್ಷ ಕೆಲಸ ಮಾಡಿದ ಮೇಲೆ ನಂತರ ಏನು ಮಾಡಬೇಕು – ಸಿದ್ಧರಾಮಯ್ಯ ಪ್ರಶ್ನೆ

ಬೆಂಗಳೂರು: ಅಗ್ನಿಪಥ್ ಯೋಜನೆ ತಂದಿದೆ. ನಾಲ್ಕು ವರ್ಷ ಕೆಲಸ ಮಾಡಿದ ಮೇಲೆ ನಂತರ ಏನು ಮಾಡಬೇಕು. 17-21 ವರ್ಷಕ್ಕೆ ಹೊರಬಂದ ನಂತರ ಯುವಕರು ಏನು ಮಾಡಬೇಕು. ಯುವಕರು ಕೆಟ್ಟ ಮಾರ್ಗ ಹಿಡಿಯುವ ವ್ಯವಸ್ಥೆಗೆ ದೂಡುತ್ತಿದ್ದಾರೆ. ನರೇಂದ್ರ ಮೋದಿಯವರು ಸಮಸ್ಯೆಗೆ ಪರಿಹಾರ ಕೊಡುವ ಕೆಲಸ ಮಾಡುತ್ತಿಲ್ಲ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು, ಮೈಸೂರಿಗೆ ಬಂದಾಗ ನಿರುದ್ಯೋಗ, ಯುವಕರು, ರೈತರ ಬಗ್ಗೆ ಮಾತನ್ನಾಡಿದ್ದಾರಾ ? ಇದನ್ನ ಯುವಕರು ಗಂಭೀರವಾಗಿ ಪರಿಗಣಿಸಬೇಕು. ಯುವಕರು ಕೆಲಸ ಕೇಳಿದರೆ ಬೋಂಡಾ, ಪಕೋಡ ಮಾರಿ ಅಂತಾ ಹೇಳುತ್ತಾರೆ. ಇದಕ್ಕಿಂತ ನೋವಿನ ಸಂಗತಿ ಇನ್ನೊಂದಿಲ್ಲ ಎಂದರು.

ಯುವಕರು 2014ರಲ್ಲಿ ಮೋದಿ ಮೋದಿ ಅಂತಾ ಕೂಗುತ್ತಿದ್ದರು. ಒಮ್ಮೆ ಬದಾಮಿಯಲ್ಲಿ ರಥ ಎಳೆಯುವಾಗ ಕೆಲವರು ಮೋದಿ ಮೋದಿ ಅಂತಾ ಕೂಗಿದರು. ಆಗ ನಾನೇ ನಿಮ್ಮ‌ ಮನೆಯನ್ನೆಲ್ಲಾ ಹಾಳು ಮಾಡಿದ್ದಾರೆ ಅಂತಾ ಹೇಳಿದೆ. ಈಗ ಸ್ವಲ್ಪ ಮೋದಿ ಅಂತಾ ಹೇಳೋದು ಕಡಿಮೆಯಾಗಿದೆ ಎಂದರು.

About The Author