Thursday, August 7, 2025

Latest Posts

ಕನ್ನಡದಲ್ಲೂ ರೀಲಿಸ್ ಆಗಲಿದೆ RGVಯ ಲಡ್ಕಿ ಸಿನಿಮಾ

- Advertisement -

ಲಾತ್ಮಕ ಸಿನಿಮಾಗಳನ್ನು ಮಾಡುವದರಲ್ಲಿ ಹೆಸರುವಾಸಿಯಾದ ಖ್ಯಾತ ನಿದೇರ್ಶಕ ರಾಮ್ ಗೋಪಾಲ್ ವರ್ಮಾ ಹಲವು ಕಥಾಹಂದರದ ಸಿನಿಮಾಗಳನ್ನು ಪ್ರೇಕ್ಷಕರೆದುರಿಗಿಸಿದ್ದಾರೆ.

ಇದೀಗ ಆರ್‍ಜಿವಿ, ಸಮರ ಕಲೆಯಾಧಾರಿತ ಪ್ಯಾನ್ ಇಂಡಿಯಾ ಸಿನಿಮಾವೊಂದಕ್ಕೆ ಆಕ್ಷನ್ ಕಟ್ ಹೇಳಿದ್ದು, ಆ ಚಿತ್ರ ಮಾರ್ಷಲ್ ಆಟ್ರ್ಸ ಹುಡುಗಿ ಎಂಬ ಟೈಟಲ್‍ನೊಂದಿಗೆ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಇದೇ 15ಕ್ಕೆ ಚಿತ್ರ ತೆರೆಗೆ ಬರುತ್ತಿದೆ.

ಚಿತ್ರದ ಕುರಿತು ಮಾಹಿತಿ ನೀಡಿದ ವರ್ಮಾ, ಇದು ತುಂಬಾ ವಿಶೇಷವಾದ ಸಿನಿಮಾ. ನಾನು ಚಿಕ್ಕವನಿದ್ದಾಗ ಎಂಟರ್ ದಿ ಡ್ರ್ಯಾಗನ್ ಸಿನಿಮಾ ನೋಡಿದ್ದೆ. ಆ ಕಥೆಯ ನಾಯಕ ಬ್ರೂಸ್ಲಿಯಿಂದ ಸ್ಫೂರ್ತಿ ಪಡೆದು ಈ ಸಿನಿಮಾ ಮಾಡಿದ್ದು, ಮಾರ್ಷಲ್ ಆಟ್ರ್ಸ್‍ಗೆ ಸಂಬಂಧಪಟ್ಟ ಸಿನಿಮಾ ಇದಾಗಿದೆ. ಈ ಕಲೆಯನ್ನು ಅಭ್ಯಾಸ ಮಾಡುವವರ ಸಂಖ್ಯೆ ವಿರಳ. ಅದರಲ್ಲೂ ಹೆಣ್ಣು ಮಕ್ಕಳು ಈ ತರಬೇತಿ ಪಡೆಯುವುದು ಕಡಿಮೆ. ನಾಯಕಿ ಪೂಜಾ ಹನ್ನೆರೆಡು ವರ್ಷದಿಂದ ಮಾರ್ಷಲ್ ಆಟ್ರ್ಸ ಅಭ್ಯಾಸ ಮಾಡುತ್ತಿದ್ದು, ಹೀಗಾಗಿ ಆಕೆಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದೆ. ಪ್ರೇಮಕಥೆಯೂ ಚಿತ್ರದಲ್ಲಿದೆ ಎಂದರು.

ಹುಡುಗಿ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿದೆ. ಆಟ್ರ್ಸಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿರುವ ಈ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಜುಲೈ 15ರಂದು ತೆರೆಕಾಣುತ್ತಿದೆ.

ಅಷ್ಟೇ ಅಲ್ಲದೇ ಅವರು ಶೀಘ್ರದಲ್ಲೇ ಹಾರರ್ ಸಿನಿಮಾವೊಂದನ್ನು ಮಾಡಲು ಮುಂದಾಗಿದ್ದಾರೆ. ಈ ಕುರಿತು ಖಾಸಗಿ ವಾಹಿನಿಯ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ರಾಮ್, ಬಾಲಿವುಡ್ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರೊಂದಿಗೆ ಹಾರರ್ ಚಿತ್ರ ಮಾಡುವ ಯೋಜನೆಯ ಬಗ್ಗೆ ಬಹಿರಂಗಪಡಿಸಿದ್ದಾರೆ.

- Advertisement -

Latest Posts

Don't Miss