Monday, December 23, 2024

Latest Posts

“ವಿಕ್ರಾಂತ್ ರೋಣ”ನ “ಹೇ ಫಕೀರ” ಹಾಡಿಗೆ ಫ್ಯಾನ್ಸ್ ಫಿದಾ..!

- Advertisement -

ಬಾದ್‌ಷಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆಗೆ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ. ಚಿತ್ರತಂಡ ಈಗಾಗ್ಲೇ ಚಿತ್ರದ ಬಗ್ಗೆ ಸಾಕಷ್ಟು ಅಪ್ಡೇಟ್‌ಗಳನ್ನ ಬ್ಯಾಕ್ ಟು ಬ್ಯಾಕ್ ಅಭಿಮಾನಿಗಳಿಗೆ ನೀಡ್ತಿದ್ದು, ಇದೀಗ ಮತ್ತೊಂದು ಸ್ಪೆಷಲ್ ಅಪ್ಡೇಟ್‌ವೊಂದನ್ನ ವಿ.ಆರ್ ಟೀಂ ಕೊಟ್ಟಿದೆ. ಎಸ್, “ವಿಕ್ರಾಂತ್ ರೋಣ” ಚಿತ್ರದ ಮೂರನೇ ಹಾಡನ್ನ ಚಿತ್ರತಂಡ ಬಿಡುಗಡೆ ಮಾಡಿದೆ.

ಈಗಾಗಲೇ ರಾ ರಾ ರಕ್ಕಮ್ಮ ಹಾಡು ರಿಲೀಸಾಗಿ ಇಡೀ ವರ್ಲ್ಡ್ ವೈಡ್ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾ ರೀಲ್ಸ್ ಓಪನ್ ಮಾಡಿದ್ರೇ ಸಾಕು ರಕ್ಕಮ್ಮನ ಹೂಕ್ ಸ್ಟೆಪ್ಪನ್ನ ಮಾಡಿರೋ ವಿಡಿಯೋಗಳೇ ಹರಿದಾಡ್ತಿದೆ. ಇದ್ರ ಬೆನ್ನಲ್ಲೇ ರಾಜಕುಮಾರಿ ಲಾಲಿ ಹಾಡು ರಿಲೀಸಾಯ್ತು. ಇದೂ ಕೂಡ ಅಭಿಮಾನಿಗಳ ಮನಸ್ಸಿಗೆ ಇಷ್ಟವಾಯ್ತು.

ಇದೀಗ ಚಿತ್ರದ ಮೂರನೇ ಹಾಡು ‘ಹೇ ಫಕೀರ’ ಹಾಡನ್ನು ರಿಲೀಸ್ ಮಾಡಿದೆ ಚಿತ್ರತಂಡ. ಈ ಹಾಡನ್ನು ನಿರೂಪ್ ಭಂಡಾರಿ ಅವರ ಮೇಲೆ ಚಿತ್ರಿಸಲಾಗಿದೆ. ರೆಟ್ರೋ ಶೈಲಿಯಲ್ಲಿರುವ ಹಾಡಿನ ಚಿತ್ರೀಕರಣ ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿದೆ.

ಒಂದು ಸಿನಿಮಾ ಹಿಟ್ ಆಗೋಕೆ ಹಾಡುಗಳ ಪಾತ್ರ ತುಂಬಾನೇ ಮುಖ್ಯವಾಗಿರುತ್ತದೆ. ಈಗ ‘ವಿಕ್ರಾಂತ್ ರೋಣ’ ಸಿನಿಮಾದ ಎರಡು ಹಾಡುಗಳು ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ.  ‘ರಾ ರಾ ರಕ್ಕಮ್ಮ’  ‘ರಾಜಕುಮಾರಿ..’ ಲಾಲಿ ಹಾಡಿನ ಬಳಿಕ ಇದೀಗ ಹೇ ಫಕೀರ  ಹಾಡು  ಕೂಡ ಸಾಕಷ್ಟು ವೀವ್ಸ್ ಪಡೆದುಕೊಳ್ಳುತ್ತಿದೆ.

ಅಂಕು ಡೊಂಕು ದಾರಿ..’ ಎಂದು ಆರಂಭವಾಗುವ ಈ ಹಾಡಿಗೆ ಸಂಜಿತ್ ಹೆಗಡೆ, ಚಿನ್ಮಯಿ ಶ್ರೀಪಾದ್, ಬಿ.ಅಜನೀಶ್​ ಲೋಕನಾಥ್​, ಅನೂಪ್ ಭಂಡಾರಿ ಧ್ವನಿ ನೀಡಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿನಿಮಾದ ಇತರ ಹಾಡುಗಳನ್ನು ಕೇಳಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಜುಲೈ 28 ಕ್ಕೆ ವಿಶ್ವದಾದ್ಯಂತ “ವಿಕ್ರಾಂತ್ ರೋಣ” ಅಬ್ಬರಿಸಲಿದ್ದಾನೆ.

- Advertisement -

Latest Posts

Don't Miss