ಬೆಂಗಳೂರು: ಟೋಲ್ ಗೇಟ್ ಬಳಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಹಾಕಲಾಗುತ್ತಿತ್ತು. ಅದನ್ನು ತಡೆದಿದ್ದಕ್ಕೆ ಬೆಂಗಳೂರು ಘಟಕದ ಕಾರ್ಯದರ್ಶಿ ಜೀವನ್ ಅವರ ಮೇಲೆ ಪೊಲೀಸರ ಸಮ್ಮುಖದಲ್ಲಿಯೇ ಸಚಿವ ವಿ.ಸೋಮಣ್ಣ ಅವರ ಬೆಂಬಲಿಗರು ಹಲ್ಲೆ ನಡೆಸಿರೋದಾಗಿ ಕೆ ಆರ್ ಎಸ್ ಪಕ್ಷದ ಆರೋಪಿಸಿದೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ವೀಡಿಯೋ, ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ರಾಷ್ಟ್ರಸಮಿತಿ ಪಕ್ಷವು,ಬೃಹತ್ ಗಾತ್ರದ ಅಕ್ರಮ ಕಟ್ಔಟ್ ಅನ್ನು ಪ್ರಶ್ನಿಸಿದ್ದಕ್ಕೆ ಸಚಿವ ಸೋಮಣ್ಣನ ಕಡೆಯ BJP ಪಕ್ಷದ ಗೂಂಡಾಗಳಿಂದ ಪೊಲೀಸರ ಸಮ್ಮುಖದಲ್ಲಿ KRS ಪಕ್ಷದ ಸೈನಿಕರ ಮೇಲೆ ದಾಳಿ, ಹಲ್ಲೆ ಮಾಡಲಾಗಿದೆ ಎಂದು ಹೇಳಿದೆ.
ಭ್ರಷ್ಟ ರಾಜಕಾರಣಿಗಳ ಮತ್ತವರ ಚೇಲಾಗಳ ಗೂಂಡಾಗಿರಿಯನ್ನು KRS ಪಕ್ಷ ತೀವ್ರವಾಗಿ ಖಂಡಿಸುತ್ತದೆ.ಪೊಲೀಸರ ಕರ್ತವ್ಯಲೋಪ ಇಲ್ಲಿ ಎದ್ದು ಕಾಣಿಸುತ್ತಿದ್ದು, ಅವರೇ ಇಲ್ಲಿ ಛೂ ಬಿಟ್ಟಂತೆ ಕಾಣಿಸುತ್ತದೆ ಎಂದು ಕಿಡಿಕಾರಿದೆ.




