ಉಚಿತ ಉದ್ಯೋಗಾಧಾರಿತ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

ಹಾವೇರಿ: ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ‘ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ’ಯಡಿ ನಿರುದ್ಯೋಗಿ ಯುವಕ , ಯುವತಿಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಸಲುವಾಗಿ ಹಾನಗಲ್‍ಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ- ಜಿಟಿಟಿಸಿ ಯಲ್ಲಿ ಉದ್ಯೋಗಾಧಾರಿತ ಉಚಿತ ತಾಂತ್ರಿಕ ಕೌಶಲ್ಯ ತರಬೇತಿಗಳನ್ನು ಆಯೋಜಿಸಲಾಗಿದೆ.

ಈ ಯೋಜನೆಯಡಿ ಸಿಎನ್‍ಸಿ ಪೆÇ್ರೀಗ್ರಾಮಿಂಗ್, ಸಿಎನ್‍ಸಿ ಆಪರೇಟಿಂಗ್, ಕ್ಯಾಡ್-ಕ್ಯಾಮ್, ಡಾಟಾ ಎಂಟ್ರಿ ಆಪರೇಟರ್, ಟರ್ನರ್, ಮಿಲ್ಲರ್ ಮತ್ತು ಗ್ರೈಂಡರ್ ವೃತ್ತಿಗಳಲ್ಲಿ ಉಚಿತ ಕೌಶಲ್ಯ ತರಬೇತಿ ನೀಡಲಾಗುವುದು. ಎಸ್‍ಎಸ್‍ಎಲ್‍ಸಿ, ಐಟಿಐ, ಡಿಪೆÇ್ಲೀಮಾ, ಅಥವಾ ಬಿ.ಇ ಪಾಸಾದ 16 ರಿಂದ 35 ವಯೋಮಿತಿಯೊಳಗಿನ ಎಲ್ಲ ವರ್ಗದ ಅಭ್ಯರ್ಥಿಗಳು ಈ ತರಬೇತಿಗಳನ್ನು ಪಡೆಯಲು ಅರ್ಹರಿರುತ್ತಾರೆ. ತರಬೇತಿ ಪಡೆಯಲು ಆದಾಯದ ಮಿತಿ ಇರುವುದಿಲ್ಲ. ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಬಸ್ ಪಾಸ್ ಮರುಪಾವತಿ ಸೌಲಭ್ಯ ಇರುತ್ತದೆ.

ಜಿಟಿಟಿಸಿ ಸಂಸ್ಥೆಯು ಉನ್ನತ ತಂತ್ರಜ್ಞಾನ ಮತ್ತು ಸೌಕರ್ಯಗಳನ್ನು ಅಳವಡಿಸಿಕೊಂಡಿದ್ದು, ಕೈಗಾರಿಕೆಗಳಲ್ಲಿ ಅನುಭವ ಹೊಂದಿದ ಶಿಕ್ಷಕರಿಂದ ಫಲಾನುಭವಿಗಳಿಗೆ ಆನ್‍ಜಾಬ್ ತರಬೇತಿ ನೀಡಲಾಗುವುದು. ಈ ತರಬೇತಿಗಳು ಕೈಗಾರಿಕೆಗಳಲ್ಲಿ ನೇರವಾಗಿ ಕೆಲಸ ಮಾಡಲು ಅನುಕೂಲವಾಗುವಂತೆ ಪಠ್ಯಕ್ರಮ ಹೊಂದಿವೆ. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಉದ್ಯೋಗ ದೊರಕಿಸಿ ಕೊಡಲಾಗುವುದು.

ತರಬೇತಿಗಳು 20-07-2022 ರಿಂದ ಪ್ರಾರಂಭವಾಗಲಿವೆ. ಆಸಕ್ತ ಅಭ್ಯರ್ಥಿಗಳು ದಿನಾಂಕ 18-07-2022 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಟಿಟಿಸಿ, ಸರ್ಕಾರಿ ಪಾಲಿಟೆಕ್ನಿಕ್ ಆವರಣ, ಪಾಳಾ ರಸ್ತೆ, ಹಾನಗಲ್ಲ. ಮೊಬೈಲ್ 7411033510 ಹಾಗೂ 9845797583 ಸಂಪರ್ಕಿಸಲು ಕೋರಲಾಗಿದೆ.

About The Author