ಸಚಿವರಿಗೆ ಸ್ವಾತಂತ್ರ ದಿನಾಚರಣೆಯಂದು ಧ್ವಜಾರೋಹಣಕ್ಕೆ ಹೊಣೆಗಾರಿಕೆ ಹಂಚಿಕೆ: ಗದಗ, ಮಂಡ್ಯ, ಬೀದರ್, ಚಿಕ್ಕಮಗಳೂರಿನಲ್ಲಿ ಡಿಸಿಗಳಿಗೆ ಹೊಣೆ

ಬೆಂಗಳೂರು : ಪ್ರತಿವರ್ಷದಂತೆ, ಈ ವರ್ಷವೂ ಆಗಸ್ಟ್ 15, 2022ರಂದು ನಡೆಯಲಿರುವಂತ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡೋದಕ್ಕೆ, ಸಚಿವರಿಗೆ ಜಿಲ್ಲೆಯ ಹೊಣೆಗಾರಿಕೆಯನ್ನು ನೀಡಿದೆ. ಈ ಪಟ್ಟಿಯಲ್ಲಿ ಕೊನೆಗೂ ಸಚಿವ ಶ್ರೀರಾಮುಲು, ಈ ಬಾರಿ ಬಳ್ಳಾರಿ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಹಾಗಾದ್ರೇ ಯಾರಿಗೆ ಯಾವ ಜಿಲ್ಲೆಯ ಹೊಣೆಗಾರಿಕೆ ಎನ್ನುವ ಮಾಹಿತಿ ಮುಂದೆ ಓದಿ.

ರಾಜ್ಯ ಸರ್ಕಾರದಿಂದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡೋ ಸಂಬಂಧ ಸಚಿವರಿಗೆ ಹೊಣೆಗಾರಿಕೆಯನ್ನು ನೀಡಿ ಆದೇಶಿಸಿದೆ. ಈ ಆದೇಶದಂತೆ ಗೋವಿಂದ ಎಂ ಕಾರಜೋಳ – ಬೆಳಗಾವಿ, ಬಿ ಶ್ರೀರಾಮುಲು – ಬಳ್ಳಾರಿ, ವಿ ಸೋಮಣ್ಣ – ಚಾಮರಾಜನಗರ, ಉಮೇಶ್ ಕತ್ತಿ – ವಿಜಯಪುರ, ಎಸ್ ಅಂಗಾರ – ಉಡುಪಿ, ಅರಗ ಜ್ಞಾನೇಂದ್ರ – ತುಮಕೂರು, ಡಾ.ಸಿಎನ್ ಅಶ್ವತ್ಥನಾರಾಯಣ – ರಾಮನಗರದಲ್ಲಿ ಧ್ವಜಾರೋಹಣ ಮಾಡಲಿದ್ದಾರೆ.

ಇನ್ನೂ ಸಿಸಿ ಪಾಟೀಲ್ – ಬಾಗಲಕೋಟೆ, ಆನಂದ್ ಸಿಂಗ್ – ಕೊಪ್ಪಳ, ಕೋಟಾ ಶ್ರೀನಿವಾಸಪೂಜಾರಿ – ಉತ್ತರ ಕನ್ನಡ, ಪ್ರಭು ಚೌಹಾಣ್ – ಯಾದಗಿರಿ, ಮುರುಗೇಶ್ ನಿರಾಣಿ – ಕಲಬುರ್ಗಿ, ಶಿವರಾಮ್ ಹೆಬ್ಬಾರ್ – ಹಾವೇರಿ, ಎಸ್ ಟಿ ಸೋಮಶೇಖರ್ – ಮೈಸೂರು, ಬಿ.ಸಿ ಪಾಟೀಲ್ – ಚಿತ್ರದುರ್ಗ, ಭೈರತಿ ಬಸವರಾಜ – ದಾವಣಗೆರೆ, ಡಾ.ಕೆ ಸುಧಾಕರ್ – ಬೆಂಗಳೂರು ಗ್ರಾಮಾಂತರ, ಕೆ.ಗೋಪಾಲಯ್ಯ – ಹಾಸನ. ಶಶಿಕಲಾ ಜೊಲ್ಲೆ – ವಿಜಯನಗರ, ಎಂ ಟಿ ಬಿ ನಾಗರಾಜ್ – ಚಿಕ್ಕಬಳ್ಳಾಪುರ, ಡಾ.ನಾರಾಯಣಗೌಡ – ಶಿವಮೊಗ್ಗದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಬಿ.ಸಿ ನಾಗೇಶ್ – ಕೊಡಗು, ವಿ ಸುನೀಲ್ ಕುಮಾರ್ – ದಕ್ಷಿಣ ಕನ್ನಡ, ಹಾಲಪ್ಪ ಆಚಾರ್ – ಧಾರವಾಡ, ಶಂಕರ್ ಬಿ ಪಾಟೀಲ್ ಮುನೇನಕೊಪ್ಪ – ರಾಯಚೂರು, ಮುನಿರತ್ನ – ಕೋಲಾರದಲ್ಲಿ ಧ್ವಜಾರೋಹಣ ಮಾಡಿದ್ರೇ, ಗದಗ, ಮಂಡ್, ಬೀದರ್ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಮಾಡಲಿದ್ದಾರೆ.

About The Author