ಈ ಮೊದಲು ನಾವು ನಿಮಗೆ ಯಾವ 10 ಗುಣಗಳಿದ್ರೆ ನಿಮಗೆ ಗೌರವ ಸಿಗುವುದಿಲ್ಲ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, 3 ಗುಣಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನೂ 3 ಗುಣಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ನಾಲ್ಕನೆಯ ಗುಣ. ಬಹುಬೇಗ ಸಿಟ್ಟಾಗುವುದು. ಮಾತು ಮಾತಿಗೂ ಕೋಪಗೊಳ್ಳುವುದು. ನೀವು ನಿಮ್ಮ ಬಗ್ಗೆ ಬೇರೆಯವರು ಮಾತನಾಡುವ ಪ್ರತೀ ಚಿಕ್ಕ ಚಿಕ್ಕ ವಿಷಯಕ್ಕೂ ಸಿಟ್ಟಾಗುತ್ತಿದ್ದರೆ. ನಿಮ್ಮ ಬಗ್ಗೆ ಮಾಡುವ ಸಣ್ಣ ಸಣ್ಣ ತಮಾಷೆಯನ್ನು ಸಿರಿಯಸ್ ಆಗಿ ತೆಗೆದುಕೊಳ್ಳುವವರಾದರೆ, ನಿಮ್ಮ ಬಳಿ ಯಾರೂ ಮಾತನಾಡಲು ಇಚ್ಛಿಸುವುದಿಲ್ಲ. ಯಾಕಂದ್ರೆ ಅವರಿಗೆ ನಿಮ್ಮ ಬಳಿ ಹೇಗೆ ಮಾತನಾಡಬೇಕು ಅಂತಲೇ ತಿಳಿಯುವುದಿಲ್ಲ. ಅವರ ಬಳಿ ಏನು ಮಾತನಾಡಿದರೂ ಅವರು ಸಿರಿಯಸ್ ಆಗುತ್ತಾರೆ, ನಾನಂತೂ ಅವರ ಬಳಿ ಮಾತನಾಡುವುದಿಲ್ಲಪ್ಪಾ ಅಂತಾ ಎದುರಿನವರು ಸುಮ್ಮನಾಗುತ್ತಾರೆ. ಆಗ ನಿಮ್ಮ ಮೇಲಿನ ಗೌರವ ಕಡಿಮೆಯಾಗುತ್ತದೆ.
ಐದನೆಯ ಗುಣ. ನೀವು ಸಮಯವನ್ನು ಸರಿಯಾಗಿ ನಿಭಾಯಿಸದಿರುವುದು. ಶಿಸ್ತಿನಿಂದ ಇರದಿರುವುದು. ಉದಾಹರಣೆಗೆ ನೀವು ಆಫೀಸಿಗೆ ಹೋಗುವವರು ಎಂದಿಟ್ಟುಕೊಳ್ಳಿ. ನೀವು ಸರಿಯಾದ ಸಮಯಕ್ಕೆ ಆಫೀಸಿಗೆ ಹೋಗದೆ, ಸರಿಯಾದ ಸಮಯಕ್ಕೆ ಕೆಲಸ ಮುಗಿಸದಿದ್ದರೆ, ನಿಮ್ಮ ಬಾಸ್ ನಿಮಗೆ ಬೈದು ಬೈದು ಬೇಸತ್ತು ಹೋಗುತ್ತಾರೆ. ನೀವೆಷ್ಟೇ ಹೇಳಿದ್ರು, ಇಷ್ಟೆ ಅಂತಾ ಗೊತ್ತಾದ ಮೇಲೆ ಸುಮ್ಮನಾಗಿ ಬಿಡುತ್ತಾರೆ. ಇದರಿಂದ ನಿಮ್ಮ ಮೇಲಿನ ಗೌರವ ಕಡಿಮೆಯಾಗುವುದಲ್ಲದೇ, ನಿಮ್ಮ ಕೆಲಸ ಹೋಗುವ ಸಂಭವವೂ ಇರುತ್ತದೆ.
ಆರನೆಯ ಗುಣ. ಬೇರೆಯವರಿಗೆ ಕೆಲ ಕೆಲಸಗಳನ್ನು ಮಾಡಲು ಫೋರ್ಸ್ ಮಾಡುವುದು. ನಿಮಗೆ ಯಾರಾದ್ರೂ ನೀನು ಈ ಕೆಲಸವೇ ಮಾಡು, ಹೀಗೆ ಚೇಂಜ್ ಆಗು ಅಂತಾ ಹೇಳಿದ್ರೆ, ನೀವು ಚೇಂಜ್ ಆಗ್ತೀರಾ..? ಖಂಡಿತ ಇಲ್ಲ. ನೀವು ನಿಮ್ಮ ಮನಸ್ಸಿಗೆ ಬಂದ ಹಾಗೆ, ನಿಮಗೆ ಹೇಗೆ ಇರಬೇಕು ಅನ್ನಿಸುತ್ತದೆಯೋ, ಹಾಗೆ ಇರುತ್ತೀರಿ. ಇತರರು ಹಾಗೆ. ಈ ಕಾರಣಕ್ಕೆ ಯಾರಿಗೂ ನೀವು ಇದೇ ಕೆಲಸ ಮಾಡು, ಹೀಗೇ ಮಾಡು, ಹಾಗೇ ಮಾಡೆಂದು ಫೋರ್ಸ್ ಮಾಡಲು ಹೋಗಬೇಡಿ. ಇದರಿಂದ ಈ ವ್ಯಕ್ತಿಯ ಸಹವಾಸವೇ ಬೇಡಪ್ಪಾ ಎಂದು ಅವರು ದೂರ ಹೋಗಿಬಿಡುತ್ತಾರೆ.
ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..




