ಆಗಸ್ಟ್ 19ರಂದು ಬಿಡುಗಡೆಯಾಗಲಿರುವಂತ ಮಾನ್ಸೂನ್ ರಾಗ ಚಿತ್ರವು, ಈಗ ಗಾಂಧಿನಗರದಲ್ಲಿ ಭಾರೀ ಸದ್ದು ಮಾಡುತ್ತಿದೆ. ಯಾಕೆಂದ್ರೇ ಹೊಸ ಬಗೆಯ ಸಿನಿಮಾ ಪ್ರಚಾರವೇ ಕಾರಣವಾಗಿದೆ.
ಹೌದು.. ಮಾನ್ಸೂನ್ ರಾಗ ಚಿತ್ರತಂಡದಿಂದ ಹೊಸ ಬಗೆಯಲ್ಲಿ ಸಿನಿಮಾ ಪ್ರಮೋಷನ್ ಗೆ ಇಳಿಸಿದೆ. ಅದೇ ಚಿತ್ರ ಬಿಡುಗಡೆಗೆ 25 ದಿನ ಬಾಕಿ ಇರುವಾಗಲೇ ರಾಜ್ಯಾಧ್ಯಂತ ಥಿಯೇಟರ್ ಗಳ ಮುಂದೆ ಕಟೌಟ್ಸ್ ಹಾಕಿರೋದಾಗಿದೆ.
ರಾಜ್ಯದ 100ಕ್ಕೂ ಹೆಚ್ಚು ಚಿತ್ರಮಂದಿರಗಳ ಮುಂದೆ ಡಾಲಿ- ರಚಿತಾ ಜೋಡಿಯ ಮಾನ್ಸೂನ್ ರಾಗ ಚಿತ್ರದ ಕಟ್ಟೌಟ್ ಎದ್ದು ಕಾಣುತ್ತಿವೆ. ಈ ಮೂಲಕ ಕಟ್ಟೌಟ್ ಮೂಲಕ ಹೊಸ ಬಗೆಯ ಸಿನಿಮಾ ಪ್ರಚಾರವನ್ನು ನಡೆಸಲಾಗುತ್ತಿದೆ.




