Thursday, July 31, 2025

Latest Posts

“ಕ್ರಾಂತಿ” ರಿಲೀಸ್‌ಗೂ ಮೊದಲೇ ಹೊಸ ಸಿನಿಮಾ ಶುರುಮಾಡಿದ ದಾಸ..!

- Advertisement -

ಸದ್ಯ ಎಲ್ಲಾ ಕಡೆ ಪ್ಯಾನ್ ಇಂಡಿಯಾ ಕಾನ್ಸೆಪಟ್‌ನಲ್ಲಿ ಸಿನಿಮಾಗಳನ್ನ ರಿಲೀಸ್ ಮಾಡೋದು ಟ್ರೆಂಡ್ ಆಗಿದೆ. ಸ್ಯಾಂಡಲ್‌ವುಡ್ ಇದಕ್ಕೆ ಹೊರತಾಗಿಲ್ಲ. ಕೆಜಿಎಫ್ ಸಿನಿಮಾ ಬಳಿಕ ರಿಲೀಸಾದ ಆಲ್‌ಮೋಸ್ಟ್ ಸ್ಟಾರ್‌ಗಳ ಸಿನಿಮಾಗಳೆಲ್ಲವೂ ಪ್ಯಾನ್ ಇಂಡಿಯನ್ ಸಿನಿಮಾಗಳೇ ಆಗಿತ್ತು.

ಇತ್ತೀಚಿಗೆ ಕಿಚ್ಚನ ವಿಕ್ರಾಂತ್ ರೋಣ ಸಿನಿಮಾ ಸಹ ವಿಶ್ವದಾದ್ಯಂತ ತೆರೆಕಂಡಿತ್ತು. ಅದರಂತೆ ಬಾಕ್ಸಾಫೀಸ್ ಸುಲ್ತಾನ್ ನಟ ದರ್ಶನ್ ಸಗ ಈ ರೇಸ್‌ನಲ್ಲಿ ಪಾಲ್ಗೊಳ್ಳಬೇಕು ಎಂಬುದು ಅವರ ಅಭಿಮಾನಿಗಳ ಬಯಕೆ ಆಗಿದೆ. ಈಗಾಗಲೇ ರಿಲೀಸಾಗಿರೋ ರಾಬರ್ಟ್ ಸಿನಿಮಾ ಬಿಡುಗಡೆಯ ಸಮಯದಲ್ಲಿ ಪ್ಯಾನ್ ಇಂಡಿಯಾ ಅಬ್ಬರ ಈಗಿನಷ್ಟಿರಲಿಲ್ಲ. ಅಲ್ಲದೇ ಆಗ ಕೋವಿಡ್ ಆತಂಕ ಕೂಡ ಜಾಸ್ತಿಯೇ ಇತ್ತು. ಹೀಗಿದ್ದರೂ ಸಹ ಡಿಬಾಸ್‌ರ ರಾಬರ್ಟ್ ಸಿನಿಮಾ ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳ ಮೆಚ್ಚುಗೆ ಪಡೆದಿತ್ತು, ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿತ್ತು. ಇದೀಗ ಕ್ರಾಂತಿ ಕರೇಜ್ ಎಲ್ಲೆಡೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಂಯಾವಾಗ ಕ್ರಾಂತಿ ತೆರೆ ಮೇಲೆ ಬರುತ್ತೆ ಅಂತ ಅಭಿಮಾನಿಗಳು ಕಾಯುತ್ತಿರೋ ಬೆನ್ನಲ್ಲೇ, ಡಿಬಾಸ್ ಅಭಿಮಾನಿಗಳಿಗೆ ಕೊಟ್ಟಿದ್ದಾರೆ ಬಂಪರ್ ನ್ಯೂಸ್.

ಹೌದು, ಕ್ರಾಂತಿ ಸಿನಿಮಾ ತಎರೆಕಾಣೋದಕ್ಕೂ ಮೊದಲೇ ಮುಂದಿನ ಹೊಸ ಚಿತ್ರದ ಶೂಟಿಂಗ್ ಸೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ ಡಿ-ಬಾಸ್. ಹೊಸ ಸಿನಿಮಾ ಸೆಟ್ಟೇರೋದಕ್ಕೆ ಡೇಟ್ ಫಿಕ್ಸ್ ಆಗಿದ್ದು, ವರಮಹಾಲಕ್ಷಿ ಹಬ್ಬದ ದಿನ ಆಗಸ್ಟ್ ೫ನೇ ತಾರೀಖು ಡಿ-೫೬ ಸೆಟ್ಟೇರಲಿದೆ. ಒಂದ್ ಸಿನಿಮಾ ಮಉಗಿದ ಬಳಿಕ ಕೊಂಚ ಗ್ಯಾಪ್ ತಗೊಳ್ತಿದ್ದ ಡಿಬಾಸ್ ಈ ಬಾರಿ ಯಾವುದೇ ಬ್ರೇಕ್ ತೆಗೆದುಕೊಳ್ಳದೇ, ಹೊಸ ಚಿತ್ರದ ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚಿಗಷ್ಟೇ ಕ್ರಾಂತಿ ಚಿತ್ರದ ಡಬ್ಬಿಂಗ್ ಪೂರೈಸಿದ್ದರು ನಟ ದರ್ಶನ್. ಇದೀಗ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ವಿಶೇಷ ಅಂದ್ರೆ ದರ್ಶನ್ ಅವರ ೫೬ನೇ ಚಿತ್ರವನ್ನೂ ಸಹ ನಿರ್ದೇಶಕ ತರುಣ್ ಸುಧೀರ್ ಡೈರೆಕ್ಷನ್ ಮಾಡಲಿದ್ದಾರೆ.ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಲಿದ್ದಾರೆ. ಅಂದ್ಹಾಗೆ ಈ ಚಿತ್ರದ ಟೈಟಲ್ ಕಾಟೇರ ಎನ್ನಲಾಗ್ತಿದ್ದು, ಈ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ಹೇಳಬೇಕಿದೆ.

- Advertisement -

Latest Posts

Don't Miss