ಉತ್ತರ ಕನ್ನಡದಲ್ಲಿ ರಕ್ಕಸ ಮಳೆಗೆ ಮರಣಮೃದಂಗ: ಮನೆ ಮೇಲೆ ಬೆಟ್ಟಕುಸಿದು ನಾಲ್ವರು ಸಾವು

ಉತ್ತರ ಕನ್ನಡ: ಭಾರೀ ಮಳೆಯಿಂದಾಗಿ ಮನೆಯ ಮೇಲೆ ಬೆಟ್ಟ ಕುಸಿದು, ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರೋ ದುರ್ಘಟನೆ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಬೆಟ್ಟ ಮನೆಯ ಮೇಲೆ ಕುಸಿತಗೊಂಡಿತ್ತು. ದಿಢೀರ್ ಬೆಟ್ಟ ಕುಸಿತದ ಪರಿಣಾಮ, ಮನೆಯಲ್ಲಿದ್ದಂತ ನಾಲ್ವರು ಮಣ್ಣಿನಡಿ ಸಿಲುಕಿದ್ದರು.

ಕೂಡಲೇ ಸ್ಥಳೀಯರು ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿಗಳು ಅವರನ್ನು ರಕ್ಷಿಸೋದಕ್ಕೆ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತಾದರೂ, ಮಣ್ಣಿನಡಿ ಸಿಲುಕ್ಕಿದ್ದಂತ ನಾಲ್ವರು ಸಾವನ್ನಪ್ಪಿದ್ದಾರೆ.

ಮೃತರನ್ನು ಲಕ್ಷ್ಮೀ ನಾಯ್ಕ್ ಮತ್ತು ಅವರ ಪುತ್ರಿ ಲಕ್ಷ್ಮೀ, ಅನಂತ ನಾಯ್ಕ್ ಹಾಗೂ ಪ್ರವೀಣ್ ನಾಯ್ಕ್ ಎಂಬುದಾಗಿ ಗುರ್ತಿಸಲಾಗಿದೆ. ಅವರ ಶವಗಳನ್ನು ಮಣ್ಣಿನಡಿಯಿಂದ ಹೊರ ತೆಗೆಯಲಾಗಿದೆ.

About The Author