ಸಿಎಂ ಬೊಮ್ಮಾಯಿ ವಿರುದ್ಧ ಫುಲ್ ಗರಂ ಆದ ಅಮಿತ್ ಶಾ.? ನಿಮ್ಮ ಕೈಲಿ ಆಗಲ್ವಾ.?

ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಆಕ್ರೋಶವನ್ನ ಹೊರ ಹಾಕಿದ್ದಾರೆ. ಬೆಂಗಳೂರಿಗೆ ಆಗಮಿಸಿರೋ ಅಮಿತ್ ಶಾ ಅವರನ್ನ, ಸಿಎಂ ಬೊಮ್ಮಾಯಿ ಬೆಳಗ್ಗೆ ಭೇಟಿಯಾಗಿ ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ರು. ಈ ವೇಳೆ ರಾಜ್ಯದಲ್ಲಿ ನಡೆದ ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಹಿಂದೂ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ. ಏನ್ ಮಾಡ್ತಿದ್ದೀರಿ ನೀವು.? ಬಿಜೆಪಿ ಕಾರ್ಯಕರ್ತರೇ, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶವನ್ನ ಹೊರ ಹಾಕ್ತಿದ್ದಾರೆ. ಸಿಎಂ ರಾಜೀನಾಮೆ ಕೊಡಲಿ ಅಂತ ಬಿಜೆಪಿಗರೇ ಕೇಳ್ತಿದ್ದಾರೆ. ಏನ್ ಮಾಡ್ತಿದ್ದೀರಿ ನೀವು.? ನಿಮ್ಮ ಕೈಯಲ್ಲಿ ನಿಭಾಯಿಸೋಕೆ ಆಗುತ್ತೋ ಆಗಲ್ವೋ ? ಎಂದು ಬೊಮ್ಮಾಯಿ ವಿರುದ್ಧ ಅಮಿತ್ ಶಾ ಗರಂ ಆಗಿದ್ದಾರೆ ಎನ್ನಲಾಗಿದೆ.

ಕಾರ್ಯಕರ್ತರು ಇದ್ರೆ ಮಾತ್ರ ಪಕ್ಷ. ಕಾರ್ಯಕರ್ತರ ಹಿತ ಕಾಪಾಡುವುದು, ಅವರನ್ನ ಸಮಾಧಾನ ಮಾಡುವುದು ನಮ್ಮ ಜವಾಬ್ದಾರಿ. ಅದು ಬಿಟ್ಟು ಒಬ್ಬ ಹೋದ್ರೆ ಮತ್ತೊಬ್ಬ ರ‍್ತಾನೆ. ಹೋದ್ರೆ ಹೋಗಲಿ ಅನ್ನೋ ಬೇಜವಾಬ್ದಾರಿ ಮಾತುಗಳಿಗೆ ಕಡಿವಾಣ ಹಾಕಬೇಕಿತ್ತು. ಇಷ್ಟು ದಿನವಾದ್ರೂ ಬಿಜೆಪಿ ಕಾರ್ಯಕರ್ತರ ಸಮಾಧಾನ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರಂತೆ.

ಈ ವೇಳೆ ಸಿಎಂ ಬೊಮ್ಮಾಯಿ ಸಮಾಧಾನ ಮಾಡಲು ಮುಂದಾದ್ರೂ, ಒಪ್ಪದ ಅಮಿತ್ ಶಾ ಸರಿಯಾಗಿ ನಿಭಾಯಿಸಿ ಎಂದು ಎಚ್ಚರಿಕೆ ನೀಡಿದ್ದಾರೆ ಅನ್ನೋ ಮಾಹಿತಿ ಬಿಜೆಪಿ ವಲಯದಿಂದ ಲಭ್ಯವಾಗ್ತಿದೆ.

About The Author