ಪ್ರಧಾನಿ ನರೇಂದ್ರ ಮೋದಿ ಬಳಿ ಜಮೀನೆಷ್ಟಿದೆ.? ಎಷ್ಟು ವಾಹನಗಳಿವೆ ಗೊತ್ತಾ.? ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆಸ್ತಿ-ಪಾಸ್ತಿ ಇದೀಗ ಏರಿಕೆಯಾಗಿದೆ. ಅವರು ಘೋಷಣೆ ಮಾಡಿರುವಂತ ಮಾಹಿತಿಯಂತೆ ಅವರ ಬಳಿ ಜಮೀನು ಎಷ್ಟಿದೆ.? ವಾಹನಗಳು ಎಷ್ಟಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ..

ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ವಿವರವನ್ನು ಘೋಷಣೆ ಮಾಡಿದ್ದಾರೆ. ಕಳೆದೊಂದು ವರ್ಷದಲ್ಲಿ ₹26.13 ಲಕ್ಷದಷ್ಟು ಚರಾಸ್ತಿ ಏರಿಕೆಯಾಗಿದೆ. ಸದ್ಯ ಅವರ ಬಳಿ ₹2.23 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇರುವುದಾಗಿ ತಿಳಿದು ಬಂದಿದೆ. 2021ರ ಮಾರ್ಚ್​ 31ರ ಮಾಹಿತಿ ಪ್ರಕಾರ, ಮೋದಿ ಅವರಲ್ಲಿ ₹1.1 ಕೋಟಿ ಮೌಲ್ಯದ ಆಸ್ತಿ ಇತ್ತು. ಅದು ಈಗ ₹2.23 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದರಲ್ಲಿ ಬಹುಪಾಲು ಬ್ಯಾಂಕ್ ಠೇವಣಿ ಆಗಿದೆ. ಗುಜರಾತ್​ನ ಗಾಂಧಿನಗರದಲ್ಲಿರುವ ಅವರ ಪಾಲಿನ ವಸತಿ ಭೂಮಿ ದಾನ ಮಾಡಿರುವ ಕಾರಣ ಯಾವುದೇ ರೀತಿಯ ಸ್ಥಿರಾಸ್ತಿ ಹೊಂದಿಲ್ಲ.

ಯಾವುದೇ ಬಾಂಡ್​, ಷೇರು ಅಥವಾ ಮ್ಯೂಚುವಲ್​ ಫಂಡ್​​​ಗಳಲ್ಲಿ ಮೋದಿ ಹೂಡಿಕೆ ಮಾಡಿಲ್ಲ. ಸ್ವಂತ ವಾಹನ ಅವರಲ್ಲಿಲ್ಲ. ₹1.73 ಲಕ್ಷ ರೂಪಾಯಿ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ. ಇದಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳ ಕಚೇರಿ ವೆಬ್​​ಸೈಟ್​​ನಲ್ಲಿ ಮಾಹಿತಿಯನ್ನು ಅಪ್​ಲೋಡ್ ಮಾಡಲಾಗಿದೆ.

ಈ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2002ರ ಅಕ್ಟೋಬರ್​ ತಿಂಗಳಲ್ಲಿ ಇತರೆ ಮೂವರೊಂದಿಗೆ ಸೇರಿ ಮೋದಿ ವಸತಿ ಪ್ಲಾಟ್ ಖರೀದಿಸಿದ್ದರು. ಆದರೆ, ಆ ಭೂಮಿಯನ್ನು ದಾನ ಮಾಡಲಾಗಿದೆ. ಹೀಗಾಗಿ, ಮೋದಿ ಅವರ ಮಾಲೀಕತ್ವ ಅದರ ಮೇಲಿಲ್ಲ. ಮಾರ್ಚ್ 31, 2022 ರ ಮಾಹಿತಿ ಪ್ರಕಾರ, ಪ್ರಧಾನ ಮಂತ್ರಿಯವರ ಕೈಯಲ್ಲಿ ₹35,250 ನಗದು, ಅಂಚೆ ಕಚೇರಿಯಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳ ಮೂಲಕ ₹ 9,05,105 ಉಳಿತಾಯ ಹಣವಿದೆ. ₹1,89,305 ಮೌಲ್ಯದ ಜೀವ ವಿಮಾ ಪಾಲಿಸಿಗಳಿವೆ.

About The Author