- Advertisement -
ಪಾಟ್ನ: ಬಿಹಾರದಲ್ಲಿ ಜನತಾದಳ ಯುನೈಟೆಡ್ (ಜೆಡಿಯು) ಮತ್ತು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನೇತೃತ್ವದ ‘ಮಹಾಘಟಬಂಧನ್’ (ಮಹಾ ಮೈತ್ರಿಕೂಟ) ನಾಳೆ ಮಧ್ಯಾಹ್ನ 2 ಪ್ರಮಾಣವಚನ ಸ್ವೀಕರಿಸಲಿವೆ.
ಎನ್ ಡಿಎ ಜೊತೆಗಿನ ಮೈತ್ರಿಯಿಂದ ಹೊರ ಬಂದ ನಂತ್ರ, ಇಂದು ಜೆಡಿಯು ಜೊತೆಗೂಡಿ, ನಿತೀಶ್ ಕುಮಾರ್ ಆರ್ ಜೆಡಿ ಸೇರಿ ಮಹಾ ಮೈತ್ರಿಕೂಟದ ಸರ್ಕಾರ ರಚಿಸೋದಾಗಿ ಘೋಷಣೆ ಮಾಡಿದ್ದರು.
ಅಲ್ಲದೇ ಬಿಹಾರ ರಾಜ್ಯಪಾಲರನ್ನು ಭೇಟಿಯಾಗಿ ಜೆಡಿಯು ಮತ್ತು ಆರ್ ಜೆಡಿ ಮೈತ್ರಿಕೂಟದ ಸರ್ಕಾರ ರಚನೆ ಮಾಡೋದಕ್ಕೆ ಹಕ್ಕು ಮಂಡಿಸಲು ಅವಕಾಶ ಕೋರಿದ್ದರು.
ಈ ಬೆನ್ನಲ್ಲೇ ಇದೀಗ ನಾಳೆ ಮಧ್ಯಾಹ್ನ 2 ಗಂಟೆಗೆ ಮಹಾಘಟಬಂಧನ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿಯಾಗಿ ತೇಜಸ್ವಿಯಾದವ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
- Advertisement -