Psc examination: kerala news
Malappuram: ಕೇರಳದ ಮಲಪ್ಪುರಂನಲ್ಲಿ ಎಲ್ಲ ಅಡೆ ತಡೆಗಳನ್ನು ಮುರಿದು ತಾಯಿಯೊಬ್ಬರು ಅದ್ಭುತ ದಾಖಲೆ ನಿರ್ಮಿಸಿದ್ದಾರೆ.ಪಿಎಸ್ ಸಿ ಪರೀಕ್ಷೆಯಲ್ಲಿ ತಾಯಿ ಮಗ ಒಟ್ಟಿಗೆ ಉತ್ತೀರ್ಣರಾಗಿದ್ದಾರೆ.42 ವರ್ಷದ ತಾಯಿ ತನ್ನ 24 ವರ್ಷದ ಮಗನೊಂದಿಗೆ ಅಧ್ಯಯನ ಮಾಡಿ,ಈಗ ಇಬ್ಬರೂ ಒಟ್ಟಿಗೆ ಪಬ್ಲಿಕ್ ಸರ್ವಿಸ್ ಕಮಿಷನ್[psc] ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ತಾಯಿ ಮತ್ತು ಮಗ ಇಬ್ಬರೂ ಕೇರಳದ ಮಲಪ್ಪುರಂ ನಿವಾಸಿಗಳು. ತಾಯಿಯ ಹೆಸರು ಬಿಂದು ಮತ್ತು ಮಗ ವಿವೇಕ್. ಈ ಸಾಧನೆ ಕುರಿತು ಮಾಧ್ಯಮದವರೊಂದಿಗೆ ತಮ್ಮ ಅನುಭವ ಹಂಚಿಕೊಂಡ ವಿವೇಕ್, ‘ನನ್ನ ತಾಯಿ ಮತ್ತು ನನ್ನ ತಂದೆ ಬೇಕಾದ ಸೌಲಭ್ಯ ಏರ್ಪಡಿಸಿದ ಕಾರಣ ಈ ಯಶಸ್ಸು ಸಾಧ್ಯವಾಯಿತು ,ನಾವು ಒಟ್ಟಿಗೆ ಕೋಚಿಂಗ್ ಕ್ಲಾಸ್ ತೆಗೆದುಕೊಂಡೆವು.ನಮ್ಮ ಶಿಕ್ಷಕರಿಂದ ನಮಗೆ ಸಾಕಷ್ಟು ಸ್ಫೂರ್ತಿ ಸಿಕ್ಕಿದೆ. ನಾವು ಒಟ್ಟಿಗೆ ಓದಿದ್ದೇವೆ ನಿಜ ಆದರೆ ನಾವು ಒಟ್ಟಿಗೆ ಯಶಸ್ವಿಯಾಗುತ್ತೇವೆ ಎಂದು ಎಂದಿಗೂ ಯೋಚಿಸಿರಲಿಲ್ಲ. ನಾವಿಬ್ಬರೂ ತುಂಬಾ ಸಂತೋಷವಾಗಿದ್ದೇವೆ ” ಎಂದು ತಮ್ಮ ಸಂತೋಷವನ್ನು ಹಂಚಿಕೊಂಡರು.
ವಿವೇಕ್ ಹತ್ತು ವರ್ಷದವನಿದ್ದಾಗ, ಬಿಂದು ಪುಸ್ತಕಗಳನ್ನು ಓದಲು ಪ್ರಾರಂಭಿಸಿದ್ದರು, ಈ ಮೂಲಕ ಅವರೂ ಓದಲು ಪ್ರಾರಂಭಿಸಿದ್ದಾರೆ.ಬಿಂದುರವರ ಓದುವ ಅಭ್ಯಾಸ ಎಲ್ಲಿಗೆ ತಲುಪಿತ್ತೆಂದರೆ ಮಗನ ಜೊತೆಗೆ ಬಿಂದು ಕೂಡಾ ವ್ಯಾಸಂಗ ಆರಂಭಿಸಿ ಈಗ ಇಬ್ಬರೂ ಕೊನೆಗೂ ಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಬಿಂದು ಲೋವರ್ ಡಿವಿಜನಲ್ ಕ್ಲರ್ಕ್ ಪರೀಕ್ಷೆಯಲ್ಲಿ 38 ನೇ ರ್ಯಾಂಕ್‌ನೊಂದಿಗೆ ಉತ್ತೀರ್ಣರಾಗಿದ್ದಾರೆ, ವಿವೇಕ್ ಕೊನೆಯ ದರ್ಜೆಯ ಸರ್ವೆಂಟ್ ಪರೀಕ್ಷೆಯಲ್ಲಿ 92 ನೇ ರ್ಯಾಂಕ್‌ನೊಂದಿಗೆ ಉತ್ತೀರ್ಣರಾಗಿದ್ದಾರೆ. ಬಿಂದು ಈ ಹಿಂದೆ 3 ಪ್ರಯತ್ನಗಳನ್ನು ನೀಡಿದ್ದರು, ಎರಡು LGS ಪರೀಕ್ಷೆಗೆ ,ಒಂದು LDC ಗೆ, ಅಂತಿಮವಾಗಿ ನಾಲ್ಕನೇ ಬಾರಿಗೆ ಯಶಸ್ಸನ್ನು ಪಡೆದಿದ್ದಾರೆ. ಬಿಂದು 10 ವರ್ಷಗಳಿಂದ ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು.




