BMTC ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಆ.15ರಂದು BMTC ಬಸ್​​ನಲ್ಲಿ ಇಡೀ ದಿನ ಉಚಿತ ಪ್ರಯಾಣ.! ವೋಲ್ವೋ ಬಸ್​ನಲ್ಲೂ ಫ್ರೀ..

ಬೆಂಗಳೂರು: ಆಗಸ್ಟ್ 15ರಂದು ಬಿಎಂಟಿಸಿಗೆ 25 ವರ್ಷ ತುಂಬುತ್ತಿದೆ. ಈ ಹಿನ್ನಲೆಯಲ್ಲಿ ರಜತ ಮಹೋತ್ಸವ ಕೂಡ ಆಚರಣೆ ಮಾಡುತ್ತಿದೆ. ಈ ದಿನದಂದು ವೋಲ್ವೋ ಸಹಿತ ಎಲ್ಲಾ ಮಾದರಿಯ ಬಸ್ ಗಳಲ್ಲಿ ಇಡೀ ದಿನ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ಈ ಕುರಿತಂತೆ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಬಿಎಂಟಿಸಿಯು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವಂತ ಸಂದರ್ಭದಲ್ಲಿ, ಆಗಸ್ಟ್ 15ರಂದು ಒಂದು ದಿನ ಪೂರ್ತಿ ಉಚಿತವಾಗಿ ಪ್ರಯಾಣಿಸಲು ಬಿಎಂಟಿಸಿ ಬಸ್ ನಲ್ಲಿ ಅವಕಾಶ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿಸಿದ್ದಾರೆ.

ಬಿಎಂಟಿಸಿ ಸಲ್ಲಿಸಿರುವಂತ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ, ಸಿಎಂ ಬೊಮ್ಮಾಯಿಯವರಿಂದ ಅನುಮೋದನೆಗೊಂಡು, ಆಗಸ್ಟ್ 15, 2022ರಂದು ಇಡೀ ದಿನ ಬಿಎಂಟಿಸಿಯ ವೋಲ್ವೋ ಸಹಿತ ಎಲ್ಲಾ ಮಾದರಿಯ ಬಸ್ ಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಉಚಿತವಾಗಿ ಸಂಚರಿಸೋದಕ್ಕೆ ಅವಕಾಶ ನೀಡಲು ಅನುಮಿತಿಸಿದೆ ಎಂಬುದಾಗಿ ಹೇಳಿದ್ದಾರೆ.

About The Author