Thursday, October 23, 2025

Latest Posts

ವಿಕಿರಣ ಸೋರಿಕೆ ಭೀತಿಯಲ್ಲಿ ಜಗತ್ತು..!,ಉಕ್ರೇನ್ ಅಣು ಸ್ಥಾವರದ ಮೇಲೆ ರಾಕೆಟ್ ದಾಳಿ: ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಸಭೆ

- Advertisement -

ukraine:

ವಿಶ್ವಕ್ಕೆ ಇದೀಗ ವಿಕಿರಣ ಸೋರಿಕೆಯ ಭೀತಿ ಎದುರಾಗಿದೆ.ಕಾರಣ ಯೂರೋಪ್ ನ ಅತಿದೊಡ್ಡ ಅಣುಸ್ಥಾವರದಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಈ ಭೀತಿ ಎದುರಾಗಿದೆ.

ಮತ್ತೊಂದೆಡೆ ರಷ್ಯಾ ವಶದಲ್ಲಿರುವ ಉಕ್ರೇನ್ ನ ಝಪೊರಿಖ್ ಝಿಯಾ ಅಣುಸ್ಥಾವರದ ಮೇಲೆ ರಾಕೆಟ್ ದಾಳಿ ನಡೆದಿದೆ. ಇದೂ ಆತಂಕಕ್ಕೆ ಕಾರಣವಾಗಿದೆ. ಅಣುವಿಕಿರಣ ಸೋರಿಕೆಯ ಭಯ ಪ್ರಾರಂಭವಾಗಿದ್ದೇ ಯುರೋಪ್ ನ ಅತೀ ದೊಡ್ಡ ಅಣುಸ್ಥಾವರದಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯ ಕಾರಣದಿಂದಾಗಿ. ಆದ್ದರಿಂದ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ತುರ್ತು ಸಭೆ ಕರೆದು, ಉಕ್ರೇನ್ ಮತ್ತು ರಷ್ಯಾ ತಕ್ಷಣ ಇಲ್ಲಿ ಮಿಲಿಟರಿ ಕಾರ್ಯಾಚಚರಣೆ ನಿಲ್ಲಿಸಬೇಕು ಎಂದು ತಾಕೀತು ಮಾಡಿತು. ವಿಶ್ವ ಸಮುದಾಯವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ವಿಕಿರಣ ದುರಂತಕ್ಕೆ ಜಗತ್ತು ಸಾಕ್ಷಿಯಾಗಬೇಕಾಗುತ್ತದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

‘ಗಂಭೀರ ದುರಂತವೊಂದು ನಮಗೆ ಎದುರಾಗುವಂಥ ಸನ್ನಿವೇಶ ಇದಾಗಿದೆ’ ಎಂಬುವುದಾಗಿ ವಿಶ್ವ ಅಣುಶಕ್ತಿ ಸಂಸ್ಥೆಯ ಮುಖ್ಯಸ್ಥ ರಫೇಲ್ ಗ್ರೊಸಿ ಭದ್ರತಾ ಮಂಡಳಿಯನ್ನು ಎಚ್ಚರಿಸಿದ್ದಾರೆ. ವಿಶ್ವ ಅಣುಶಕ್ತಿ ಸಂಸ್ಥೆಗೆ ತುರ್ತಾಗಿ ಝಪೊರಿಖ್​​ಝಿಯಾ ಅಣುಸ್ಥಾವರ ಭೇಟಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಅಣುಸ್ಥಾವರದ ಮೇಲಿನ ದಾಳಿ ಕುರಿತು ಉಕ್ರೇನ್​ ರಾಜಧಾನಿ ಕೀವ್​ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಪ್ರತಿಕ್ರಿಯಿಸಿದ್ದಾರೆ.ರಷ್ಯಾ ಪಡೆಗಳು ಇಡೀ ಜಗತ್ತಿಗೆ ’ಅಣುವಿಕಿರಣದ ಬೆದರಿಕೆ’ ಹಾಕಿವೆ. ಝಪೊರಿಖ್​​ಝಿಯಾ ಆಕ್ರಮಿಸಿಕೊಂಡಿರುವವರನ್ನು ಹೊರದಬ್ಬಲು ವಿಶ್ವ ಸಮುದಾಯವು ತಕ್ಷಣ ಪ್ರತಿಕ್ರಿಯಿಸಬೇಕೆಂದು ಕರೆ ನೀಡಿದ್ದಾರೆ. ‘ಉಕ್ರೇನ್​ನಿಂದ ರಷ್ಯನ್ನರು ಸಂಪೂರ್ಣವಾಗಿ ಹಿಂದೆ ಸರಿಯುವುದು ಮಾತ್ರವೇ ಯೂರೋಪ್​ಗೆ ಅಣುವಿಕಿರಣ ದುರಂತದಿಂದ ರಕ್ಷಣೆ ನೀಡುವ ಖಾತ್ರಿ ಸಿಗಲು ಸಾಧ್ಯ’ ಎಂಬುದಾಗಿ ಝೆಲೆನ್​ಸ್ಕಿ ವಿಡಿಯೊ ಸಂದೇಶದಲ್ಲಿ ತಿಳಿಸಿದರು.

ಕಳೆದ ಐದು ತಿಂಗಳಿನಿಂದ ನಡೆಯುತ್ತಿರುವ ಉಕ್ರೇನ್ ಸಂಘರ್ಷದಲ್ಲಿ ಇದು ಅತ್ಯಂತ ಅಪಾಯಕಾರಿ ಸನ್ನಿವೇಶ ಎಂದು ವಿಶ್ಲೇಷಿಸಲಾಗಿದೆ. ಅಣುಸ್ಥಾವರದಲ್ಲಿ ರೇಡಿಯೊ ವಿಕಿರಣ ವಸ್ತುಗಳನ್ನು ಸಂಗ್ರಹಿಸಿಟ್ಟಿರುವ ಪ್ರದೇಶದಲ್ಲಿ ಎರಡೂ ಪಡೆಗಳು ರಾಕೆಟ್ ದಾಳಿ ಮಾಡಿವೆ. ಸ್ವಲ್ಪ ಹೆಚ್ಚುಕಡಿಮೆಯಾದರೂ ವಿಕಿರಣ ಸೋರಿಕೆಯಾಗಿ ಇಡೀ ಜಗತ್ತು ಅಪಾಯದಲ್ಲಿ ಸಿಲುಕಬಹುದು ಎಂಬ ಆತಂಕ ಎದುರಾಗಿದೆ.

ವಿಶ್ವ ಕದನ ವಿರಾಮಕ್ಕೆ ಪ್ರಸ್ತಾಪಿಸಿದ ತ್ರಿಸದಸ್ಯ ಸಮಿತಿಯಲ್ಲಿ ಪ್ರಧಾನಿ ಮೋದಿ ಹೆಸರು

- Advertisement -

Latest Posts

Don't Miss