ಬೆಂಗಳೂರು: ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಸಂಕೀರ್ಣದಲ್ಲಿ ಸ್ವಾತಂತ್ರದ ಅಮೃತಮಹೋತ್ಸವ ಪ್ರಯುಕ್ತ ಎಲ್ಲಾ ಉದ್ಯೋಗಿಗಳಿಗೆ ಹಾಗೂ ಪಾಲುದಾರರಿಗೆ 20,000 ಧ್ವಜಗಳನ್ನು ವಿತರಿಸಲಾಗಿದೆ. ಈ ಮೂಲಕ ಅದ್ಧೂರಿಯಾಗಿ ಸ್ವಾತಂತ್ರೋತ್ಸವ ಆಚರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ.
ವಿತರಿಸಲಾಗಿರುವಂತ ಧ್ವಜಗಳನ್ನು ಬಿಇಎಲ್ ನ ಎಲ್ಲಾ ಉದ್ಯೋಗಿಗಳು, ಪರಿಯೋಜನ ಅಭಿಯಂತರು ಹಾಗೂ ಪ್ರಶಿಕ್ಷಣಾರ್ಥಿಗಳು ತಮ್ಮ ಮನೆಯ ಮೇಲೆ ಹಾರಿಸಿ, ಅದರ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವಂತೆ ಸಂಸ್ಥೆ ನೌಕರರಿಗೆ ಮನವಿ ಮಾಡಿದೆ.
ನಾಳೆ ಭಾರತೀಯ ರೆಡ್ ಕ್ರಾಸ್ ಸಹೋಯಗದಲ್ಲಿ ಬಿಇಎಲ್ ನಲ್ಲಿ 2000 ರಕ್ತ ಸಂಗ್ರಹಿಸುವಂತ ಗುರಿಯೊಂದಿಗೆ ರಕ್ತ ದಾನ ಶಿಬಿರವನ್ನು ಆಯೋಜಿಸಲಾಗಿದೆ. ಈ ರಕ್ತದಾನ ಶಿಬಿರದಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಉದ್ಯೋಗಿಗಳ ಕಲ್ಯಾಣ ನಿಧಿಯ ನೇತೃತ್ವದಲ್ಲಿ ಎಲ್ಲಾ ಅಂಗಸಂಸ್ಥೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೊಳ್ಳಲಿವೆ.
75 ಸ್ವಾತಂತ್ರ್ಯಯೋಧರ ಚಿತ್ರಸಹಿತ ಬ್ಯಾನರ್ ಗಳನ್ನು ಕಾರ್ಖಾನೆಯ ಎಲ್ಲ ಪ್ರಮುಖ ಸ್ಥಳಗಳಲ್ಲಿ ಹಾಗೂ ಭಾರತ್ ಎಲೆಕ್ಟ್ರಾನಿಕ್ಸ್ ಟೌನ್ ಶಿಪ್ ಎಲ್ಲಾ ಕಡೆ ಹಾಗೂ ಎಲ್ಲಾ ಕಟ್ಟಡಗಳ ಮೇಲೆ ಪ್ರದರ್ಶಿಸಲಾಗಿದೆ.
15 ಆಗಸ್ಟ್ 2022 ರಂದು ಬಿ ಇ ಎಲ್ ಕಾರ್ಖಾನೆ, ಶೈಕ್ಷಣಿಕ ಸಂಸ್ಥೆ, ಕಾಲೋನಿ ಯಲ್ಲಿ ಸ್ವಾತಂತ್ರದ ಅಮೃತಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಡಿಜಿಟಲ್ ಮಾಧ್ಯಮದ ಮೂಲಕ ಸ್ವಾತಂತ್ರ್ಯ ಯೋಧರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ.