Thursday, December 26, 2024

Latest Posts

ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು: ಬಿಹಾರದ 19 ವರ್ಷದ ಕಾರ್ಮಿಕನನ್ನು ಗುಂಡಿಕ್ಕಿ ಹತ್ಯೆ

- Advertisement -

Jammu and kashmeer:

ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ಬಂಡೀಪೊರದಲ್ಲಿ ಬಿಹಾರದ ಯುವಕನೊಬ್ಬ ಗುಂಡಿನ  ದಾಳಿಗೆ ಬಲಿಯಾಗಿದ್ದಾನೆ.ಭಯೋತ್ಪಾದಕರು ಬಿಹಾರ ಮೂಲದ 19 ವರ್ಷದ ಯುವಕನನ್ನು ಜಮ್ಮು ಮತ್ತು ಕಾಶ್ಮೀರದ ಬಂಡೀಪೊರದಲ್ಲಿ  ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂಬುವುದಾಗಿ ಶುಕ್ರವಾರ ಪೊಲೀಸರು  ಮಾಹಿತಿ ನೀಡಿದ್ದಾರೆ.ಮಧ್ಯರಾತ್ರಿಯ ಸುಮಾರಿಗೆ ಈ ದಾಳಿ ನಡೆದಿದೆ ಎಂಬುವುದಾಗಿ ಹೇಳಲಾಗುತ್ತಿದೆ.

ಗುಂಡಿನ ದಾಳಿಯಲ್ಲಿ ರಕ್ತದ ಮಡುವಿನಲ್ಲಿದ್ದ ಅಮ್ರೇಜ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ತೀವ್ರ ಗಾಯದಿಂದಾಗಿ ಅಮ್ರೇಜ್ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ.

ಸಹೋದರನು ನೀಡಿದ ಮಾಹಿತಿ  ಪ್ರಕಾರವಾಗಿ” ಇಂದು  ಬೆಳಿಗ್ಗೆ 12.20ರ ಸುಮಾರಿಗೆ ನನ್ನ ಸಹೋದರ ನನ್ನನ್ನು ಎಬ್ಬಿಸಿದನು. ಅಷ್ಟರಲ್ಲಾಗಲೇ ಗುಂಡಿನ ದಾಳಿ ಪ್ರಾರಂಭವಾಗಿತ್ತು. ಅವನು ಎಲ್ಲೂ ಕಾಣಲಿಲ್ಲ. ಆಗ ಅವನು ಶೌಚಾಲಯಕ್ಕೆ ಹೋಗಿದ್ದಾನೆಂದು ನಾವು ಭಾವಿಸಿದೆವು. ನಾವು ಅದನ್ನು ಪರಿಶೀಲಿಸಲು ಹೋದೆವು. ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ನಾವು ಭದ್ರತಾ ಸಿಬ್ಬಂದಿಯನ್ನು ಸಂಪರ್ಕಿಸಿದೆವು. ಅವರನ್ನು ಹಜಿನ್‌ಗೆ ಕರೆತರಲಾಯಿತು. ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ” ಎಂಬುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಾಜೌರಿ ಜಿಲ್ಲೆಯ ಸೇನಾ ಶಿಬಿರದ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ನಾಲ್ವರು ಯೋಧರನ್ನು ಕೊಂದ ಬೆನ್ನಲ್ಲೇ ಈ ದಾಳಿ ನಡೆದಿದೆ ಎಂಬುವುದಾಗಿ ಹೇಳಲಾಗುತ್ತಿದೆ. ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್[JEM] ಸಂಘಟನೆಯವರು ಈ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆಇಂದು ಬೆಳಿಗ್ಗೆ [.ಅ.12 ಶುಕ್ರವಾರ]2 ಗಂಟೆಗೆ ಪ್ರಾರಂಭವಾದ ನಾಲ್ಕು ಗಂಟೆಗಳ ಗುಂಡಿನ ಕಾಳಗದ ನಂತರ ಕಾರ್ಮಿಕನನ್ನು ಹೊಡೆದುರುಳಿಸಲಾಗಿದೆ ಎಂಬ ಮಾಹಿತಿ ಇದೆ.

ವಿಕಿರಣ ಸೋರಿಕೆ ಭೀತಿಯಲ್ಲಿ ಜಗತ್ತು..!,ಉಕ್ರೇನ್ ಅಣು ಸ್ಥಾವರದ ಮೇಲೆ ರಾಕೆಟ್ ದಾಳಿ: ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಸಭೆ

- Advertisement -

Latest Posts

Don't Miss