ಬಿಜೆಪಿ ಶಾಸಕ ಎಎಸ್ ಪಾಟೀಲ್ ನಡಹಳ್ಳಿಯಿಂದ ರಾಷ್ಟ್ರಧ್ವಜಕ್ಕೆ ಅವಮಾನ: ತ್ರಿವರ್ಣ ಧ್ವಜ ಹೊದ್ದಿದ್ದ ಆನೆಯ ಮೇಲೆ ಪುತ್ರನ ಸವಾರಿ

ವಿಜಯಪುರ: ಶಾಸಕನಿಂದಲೇ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವಂತ ಘಟನೆ, ಜಿಲ್ಲೆಯ ತಾಳಿಕೋಟೆಯಲ್ಲಿ ಇಂದು ನಡೆದಿದೆ.

ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿಯಿಂದಲೇ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ. ಹೀಗಾಗಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ಉಂಟಾಗಿದೆ.

ಅಂದಹಾಗೇ, ಇಂದು ತಾಳಿಕೋಟೆಯಲ್ಲಿ ನಡೆದಂತ ಹರ್ ಘರ್ ತಿರಂಗಾ ರ‌್ಯಾಲಿಯಲ್ಲಿ ಶಾಸಕ ಎ.ಎಸ್ ಪಾಟೀಲ ನಡಹಳ್ಳಿ ಯಡವಟ್ಟು ಮಾಡಿದ್ದಾರೆ.

ಆನೆ‌ ಮೇಲೆ ತ್ರಿವರ್ಷ ಧ್ವಜ ಹೊದಿಸಿ ಅದರ‌ ಮೇಲೆ ಅವರ ಮಗನನ್ನು ಕೂಡಿಸಿ ಅಪಮಾನ ಮಾಡಿದ್ದಾರೆ. ಆಲಮಟ್ಟಿಯಿಂದ ತಾಳಿಕೋಟೆ ವರೆಗೆ ನಡೆದ ಆಜಾದಿ‌ಕಾ ಅಮೃತ ಮಹೋತ್ಸವ ರ‌್ಯಾಲಿ ಈ ಘಟನೆ ನಡೆದಿದೆ.

ಆನೆ ಮೇಲಿದ್ದ ತ್ರಿವರ್ಣ ಧ್ವಜದ ಮೇಲೆ ತಮ್ಮ ಮಗನನ್ನು‌ ಕೂಡಿಸಿದ್ದಂತ ಬಿಜೆಪಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಉದ್ಧಟತನದ ವೀಡಿಯೋ ಸಾಮಾಜಿಕ‌‌ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

About The Author