Saturday, December 21, 2024

Latest Posts

ಶಾಸಕನಿಂದಲೇ ರಾಷ್ಟ್ರಧ್ವಜಕ್ಕೆ ಅವಮಾನ: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ

- Advertisement -

ವಿಜಯಪುರ: ದೇಶವೇ ಅಮೃತ ಮಹೋತ್ಸವದ ಸಂಭ್ರಮದಲ್ಲಿರಬೇಕಾದರೆ ವಿಜಯಪುರದಲ್ಲಿ ಶಾಸಕನಒಬ್ಬ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಘಟನೆ ನಡೆದಿದೆ.ಶಾಸಕನ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಹರ್ ಘರ್ ತಿರಂಗಾ ರ್ಯಾಲಿಯಲ್ಲಿ ಶಾಸಕ ಎ.ಎಸ್ ಪಾಟೀಲ ನಡಹಳ್ಳಿ ಯಡವಟ್ಟು ಮಾಡಿಕೊಂಡಿದ್ದಾರೆ. ಆನೆ‌ ಮೇಲೆ ತ್ರಿವರ್ಣ ಧ್ವಜ ಹೊದಿಸಿ ಅದರ‌ ಮೇಲೆ ಅವರ ಮಗನನ್ನು ಕೂಡಿಸಿ ಅಪಮಾನ ಮಾಡಿದ ಘಟನೆ ನಡೆದಿದೆ. ಆಲಮಟ್ಟಿಯಿಂದ ತಾಳಿಕೋಟೆ ವರೆಗೆ ನಡೆದ ಆಜಾದಿ‌ಕಾ ಅಮೃತ ಮಹೋತ್ಸವ ರ್ಯಾಲಿಯಲ್ಲಿ ಈ ಘಟನೆ ನಡೆದಿದೆ.ಬಿಜೆಪಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಉದ್ಧಟತನದ ವೀಡಿಯೋ  ಈಗ ಸಾಮಾಜಿಕ‌‌ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು ಶಾಸಕ ನಡಹಳ್ಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

- Advertisement -

Latest Posts

Don't Miss