Saturday, March 15, 2025

Latest Posts

ಬಿಗ್ ಬುಲ್ ರಾಕೇಶ್ ಜುಂಜುವಾಲ ಇನ್ನು ನೆನಪು ಮಾತ್ರ

- Advertisement -

ದೇಶದ 36ನೇ ಪಟ್ಟಿಯಲ್ಲಿದ್ದ ಶ್ರೀಮಂತ ಇನ್ನು ಕೇವಲ ನೆನಪು ಮಾತ್ರ. ಷೇರ್ ಮಾರುಕಟ್ಟೆಯ ಕಿಂಗ್ ನಮ್ಮನ್ನೆಲ್ಲಾ ಅಗಲಿ ಪರಮಾತ್ಮನನ್ನು ಸೇರಾಗಿದೆ. ಭಾರತದ ವಾರೆನ್ ಭಫೆಟ್ ಇನ್ನು ನೆನಪು ಮಾತ್ರ ಆದರೆ ಅವರು ಬಿಟ್ಟು ಹೋದ ಧೀಮಂತಿಕೆ ಶ್ರೀಮಂತಿಕೆಯ ಕೊಡುಗೆ ಮಾತ್ರ ಶಾಶ್ವತ. ಹಾಗಿದ್ರೆ ಶ್ರೀಮಂತ ವ್ಯಕ್ತಿಯಾರು ಅವರ ಜೀವನಗಾಥೆಯಾದ್ರು ಏನು ಇಲ್ಲಿದೆ ವಿವರ

ರಾಕೇಶ್ ಜುಂಜುವಾಲ ಹುಟ್ಟಿದ್ದು 1960 ಜುಲೈ 5 ರಂದು. ರಾಜಸ್ಥಾನಿ ಕುಟುಂಬಕ್ಕೆ ಸೇರಿದ ಇವರಿಗೆ ಲಕ್ಷ್ಮೀ ಕಟಾಕ್ಷೆ ಮೊದಲಿನಿಂದಲೇ ಪ್ರಾಪ್ತಿಯಾಗಿತ್ತು ಮುಂಬೈ ನಲ್ಲಿ ವಾಸವಿದ್ದ ಷೇರ್ ಮಾರುಕಟ್ಟೆ ಕಿಂಗ್ ತಂದೆ ಆದಾಯ ತೆರಿಗೆ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬಾಲ್ಯ ಜೀವನವನ್ನು ಅಲ್ಲೇ ಕಳೆದ ಶ್ರೀಮಂತ ವ್ಯಕ್ತಿ ನಂತರ ರಾಕೇಶ್ ಸೈಡನ್ ಹ್ಯಾಮ್ ಕಾಲೇಜಿನಿಂದ ಪದವಿಯನ್ನು ಪಡೆದ್ರು ನಂತರ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಲ್ಲಿ ಸೇರಿಕೊಂಡರು.

ಬಿಗ್ ಬುಲ್ ಆಸ್ತಿ ಎಷ್ಟು ಶತಕೋಟಿ ಗೊತ್ತಾ?!

ಅವರು ಅಂದಾಜು $ 5.5 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದರು ಬಿಗ್ ಬುಲ್. ಇದು ಅವರನ್ನು ಭಾರತದಲ್ಲಿ 36ನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿತ್ತು. ಸಕ್ರಿಯ ಹೂಡಿಕೆದಾರರಲ್ಲದೆ, ಜುಂಜುನ್‌ವಾಲಾ ಆಪ್ಟೆಕ್ ಲಿಮಿಟೆಡ್ ಮತ್ತು ಹಂಗಾಮಾ ಡಿಜಿಟಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ಪ್ರೈವೇಟ್‌ ಲಿಮಿಟೆಡ್‌ನ ಮುಖ್ಯಸ್ಥರಾಗಿದ್ದರು. ಅಲ್ಲದೆ, ಪ್ರೈಮ್ ಫೋಕಸ್ ಲಿಮಿಟೆಡ್, ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್, ಬಿಲ್ಕೇರ್ ಲಿಮಿಟೆಡ್, ಪ್ರಜ್ ಇಂಡಸ್ಟ್ರೀಸ್ ಲಿಮಿಟೆಡ್, ಪ್ರೊವೋಗ್ ಇಂಡಿಯಾ ಲಿಮಿಟೆಡ್, ಕಾನ್ಕಾರ್ಡ್ ಬಯೋಟೆಕ್ ಲಿಮಿಟೆಡ್, ಇನ್ನೋವಸಿಂತ್ ಟೆಕ್ನಾಲಜೀಸ್ ಲಿಮಿಟೆಡ್, ಮಿಡ್ ಡೇ ಮಲ್ಟಿಮೀಡಿಯಾ ಲಿಮಿಟೆಡ್, ನಾಗಾರ್ಜುನ ಕನ್ಸ್‌ಟ್ರಕ್ಷನ್‌ ಕಂಪನಿ ಲಿಮಿಟೆಡ್ ಮತ್ತು ಟಾಪ್ಸ್ ಸೆಕ್ಯುರಿಟಿ ಲಿಮಿಟೆಡ್ – ಹೀಗೆ ಹಲವು ಕಂಪನಿಗಳ ನಿರ್ದೇಶಕರ ಮಂಡಳಿಯಲ್ಲಿದ್ದು ಖ್ಯಾತಿ ಗಳಿಸಿದ್ದರು.

ಇತ್ತೀಚೆಗಷ್ಟೇ ರಾಕೇಶ್ ಜುಂಜುನ್‌ವಾಲಾ ಮತ್ತು ಮಾಜಿ ಜೆಟ್ ಏರ್‌ವೇಸ್ ಸಿಇಒ ವಿನಯ್ ದುಬೆ ಸೇರಿ ‘ಆಕಾಶ್ ಏರ್’ ಭಾರತೀಯ ವಿಮಾನಯಾನ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಈ ಏರ್‌ಲೈನ್ ಪ್ರಸ್ತುತ 2 ವಿಮಾನಗಳನ್ನು ಹೊಂದಿದ್ದು, 70ಕ್ಕೂ ಹೆಚ್ಚಿನ ವಿಮಾನಗಳನ್ನು ಸೇರಿಸುವ ಮಹಾತ್ವಾಕಾಂಕ್ಷೆಯನ್ನು ಅವರು ಹೊಂದಿದ್ದರು. ಇದೇ ಆಗಸ್ಟ್ 9ರಿಂದ ಭಾರತದ 3 ನಗರಗಳ ನಡುವೆ ‘ಆಕಾಶ್ ಏರ್’ ಕಾರ್ಯಾರಂಭ ಮಾಡಿತ್ತು.

5000ದಿಂದ 5ಬಿಲಿಯನ್ ವರೆಗೆ

ಸಾಧಿಸಿದರೆ ಸಬಳವನ್ನು ನುಂಗ ಬಹುದು ಎಂಬ ಗಾದೆ ಮಾತಿನಂತೆ ಬಿಗ್ ಬುಲ್ ಸಾಧನೆಯ ಹಾದಿಯೇ ಅವರ ಯಶಸ್ಸಿಗೆ ಸಾಕ್ಷಿ. ಹೌದು  ದೇಶದ  ಶ್ರೀಮಂತ  ಕೇವಲ 5000ದಿಂದ ಶುರು ಮಾಡಿದ ಉದ್ಯಮ ಇಂದು 5000 ಬಿಲಿಯನ್ ಗೆ ಬೆಳೆದು ನಿಂತಿದೆ. ಹೌದು 2021 ರ ವೇಳೆಗೆ ಟೈಟಾನ್ ಕಂಪೆನಿಯ ಅವರ ಹೂಡಿಕೆ 7,294.8 ಮೌಲ್ಯದ್ದಾಗಿದೆ.ಈ ಸಾಧನೆಯಿಂದಲೇ ರಾಕೇಶ್‌ ಜುಂಜುನ್ವಾಲಾ ಅವರು “ಬಿಗ್ ಬುಲ್ ಆಫ್ ಇಂಡಿಯಾ” ಮತ್ತು “ಕಿಂಗ್ ಆಫ್ ಬುಲ್ ಮಾರ್ಕೆಟ್” ಎಂದು ಪ್ರಖ್ಯಾತಿ ಹೊಂದಿದವರು. ಅವರ ಷೇರು ಮಾರುಕಟ್ಟೆ ಮುನ್ಸೂಚನೆಗಳು ಮತ್ತು ಷೇರು ಮಾರುಕಟ್ಟೆಯ ಗೂಳಿಯ ದೃಷ್ಟಿಕೋನಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದವರು.

ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬಿಗ್ ಬುಲ್ ಅಗಸ್ಟ್ 14 ಆದಿತ್ಯವಾರದಂದು ನಿಧನರಾದರು. ಉದ್ಯಮಿ ರಾಕೇಶ್​ ಜುಂಜುನವಾಲಾ ತನ್ನ 62 ನೇ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದರು. ಬಹುಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದ ರಾಕೇಶ್​ ಮುಂಬೈನ ಬ್ರೀಚ್​​ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ್ರು. ಬೆಳಗ್ಗೆ 6.45 ರ ವೇಳೆಗೆ ಅವರು ವಿಧಿವಶರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗೆ ಅವರು ತೀರಿಕೊಂಡಿದ್ದರು ಎಂಬುದು ಶೋಕಕರ ಸಂಗತಿ

ಒಟ್ನಲ್ಲಿ ವ್ಯಕ್ತಿ ಮರೆಯಾದ್ರು ವ್ಯಕ್ತಿತ್ವ ನಾಶವಾಗುವುದಿಲ್ಲ ಎನ್ನುವುದು ಬಿಗ್ ಬುಲ್ ಸಾಧನೆಯೆ ಸಾಕ್ಷಿ.ಆದರೂ ಭಾರತದ 36ನೇ ಶ್ರೀಮಂತನನ್ನು ಕಳೆದು ಕೊಂಡಿದ್ದು ದೇಶಕ್ಕೆ ತುಂಬಲಾರದ ನಷ್ಟವೇ

.

 

- Advertisement -

Latest Posts

Don't Miss