ದೇಶದೆಲ್ಲೆಡೆ 75ರ ಸ್ವಾತಂತ್ರೋತ್ಸವದ ಸಂಭ್ರಮ. ಹರುಷ ಘೋಷೊಧ್ಗಾರಗಳು ಎಲ್ಲೆಲ್ಲು ಮೊಳಗುತ್ತಿವೆ. ಕೋಲಾರದಲ್ಲೂ ಸ್ವಾತಂತ್ರ್ಯೋತ್ಸವದ ಸಡಗರ ಸಂಭ್ರಮಿಸಿತ್ತು. ನಗರದ ವಿವಾದಿತ ಕ್ಲಾಕ್ ಟವರ್ ಮೇಲೆ ತಿರಂಗ ಬಾನಂಚಿಗೆ ಹಾರಾಡಿತು.
ಕೋಲಾರದ ವಿವಾದಿತ ಟವರ್ ಎಂದೇ ಬಿಂಬಿಸಲಾಗಿರುವ ಕ್ಲಾಕ್ ಟವರ್ ಮೇಲೆ ಇಂದು ಸ್ವಾತಂತ್ರದ ಧ್ವಜ ಹಾರಾಡಿತು.ಕೈಯಲ್ಲಿ ತಿರಂಗವನ್ನು ಹಿಡಿದುಕೊಂಡು ಒಂದೆಡೆ ವಿಧ್ಯಾರ್ಥಿಗಳು ಹರ್ಷದಿಂದಲೇ ಮುಗಿಲೆತ್ತರಕ್ಕೆ ಚಾಚಿ ದೇಶಾಭಿಮಾನವನ್ನು ಸಾರಿದರು. ಮತ್ತೊಂದೆಡೆ ಅಂಬೆಡ್ಕರ್ ಗಾಂಧಿ ಪೋಟೋಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ವಂದನೆ ಸಲ್ಲಿಸಿದರು ಸಂಸದ ಎಸ್ ಮುನಿಸ್ವಾಮಿ ಕೋಲಾರ ಜಿಲ್ಲಾಧಿಕಾರಿ ವೆಂಕಟರಾಜು.
ಸ್ವಾತಂತ್ರ್ಯೋತ್ಸವದ ಶುಭ ಘಳಿಗೆಯಲ್ಲಿ ಕೋಲಾರ ಜಿಲ್ಲಾಧಿಕಾರಿ ವೆಂಕಟರಾಜು ಹಾಗೂ ಎಸ್ಪಿ ಡಿ ದೇವರಾಜ್ ಕ್ಲಾಕ್ ಟವರ್ ಮೇಲೆ ರಾಷ್ಟ್ರ ಧ್ವಜಾರೋಹಣ ಮಾಡಿ ಗೌರವ ಸಲ್ಲಿಸಿದರು. ತದ ನಂತರ ಕೋಲಾರದ ಜನತೆಗೆ ದೇಶಾಭಿಮಾನದ ಸಂದೇಶ ನೀಡಿದರು, ಸಂಸದ ಎಸ್ ಮುನಿಸ್ವಾಮಿ.
75ರ ಸ್ವಾತಂತ್ರ್ಯೋತ್ಸವದಲ್ಲಿ ಕೋಲಾರ ಕಳೆಗಟ್ಟಿತ್ತು.ಜೊತೆಗೆ ಪೊಲೀಸರ ಸರ್ಪಗಾವಲು ಕೋಲಾರದಲ್ಲಿ ಬೀಡುಬಿಟ್ಟಿತ್ತು. 300 ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಭದ್ರತೆ ನೀಡಲಾಗಿತ್ತು. ಡ್ರೋನ್ ಕಣ್ಗಾವಲಲ್ಲಿ ಕ್ಲಾಕ್ ಟವರ್ ಸುತ್ತಮುತ್ತಲ ಪೋಲೀಸರು ಪಹರೆ ನಡೆಸುತ್ತಿದ್ದರು. ಸಂಸದ ಎಸ್ ಮುನಿಸ್ವಾಮಿ, ಸ್ಥಳೀಯ ಮುಖಂಡರು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು . ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾದ್ರು.