75ನೇ ಸ್ವತಂತ್ರ ಮಹೋತ್ಸವ ಆಚರಣೆ ಜಗಳೂರು ಜಗಳೂರಿನ ತಾಲೂಕು ರಂಗ ಮಂದಿರ ದಲ್ಲಿ ಅಮೃತ ಮಹೋತ್ಸವ ನಡೆಯಿತು ಈ ಸಂದರ್ಭದಲ್ಲಿ ಎಸ್ ವಿ ರಾಮಚಂದ್ರಪ್ಪ ಹಾಗೂ ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಅಧಿಕಾರಿಗಳು ಭಾಗಿಯಾಗಿದ್ದರು.
ಎಸ್ ವಿ ರಾಮಚಂದ್ರಪ್ಪನವರು ಮಾತನಾಡಿ, ತಾಲೂಕಿನ ಸ್ವತಂತ್ರ ಹೋರಾಟಗಾರರಾದ ತೋರಣಗಟ್ಟೆ ದೇವರ ಸಂಜೀವಪ್ಪ ಅಂಗಡಿ ಕೃಷ್ಣಪ್ಪ ಪಂಡಿತ ಬಾಲ ಕೃಷ್ಣಪ್ಪ ಭಾಸ್ಕರ್ ತಿಮ್ಮಪ್ಪ ರಾಟೆ ಅಂಜಿನಪ್ಪ ಸಂಗೇನಹಳ್ಳಿ ತಿಮ್ಮ ರೆಡ್ಡಿ ಸಿ ನಾಗಮ್ಮ ಕಲ್ಲಿನಗೌಡ್ರು ಮಾದಿಹಳ್ಳಿ ಚಂದ್ರಪ್ಪ ಇವರುಗಳೆಲ್ಲ ಸ್ವತಂತ್ರ ಹೋರಾಟ ಚಳುವಳಿಯಲ್ಲಿ ಭಾಗಿಯಾಗಿದ್ದರು, ನಮ್ಮ ತಾಲೂಕಿನ ಗಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಅದಲ್ಲದೆ ತಾಲೂಕಿನ ಭದ್ರಾ ಮೇಲ್ದಂಡೆ ಯೋಜನೆಯ ತಾಲೂಕಿನ ಕೆರೆಗಳನ್ನು ನೀರು ತುಂಬಿಸುವ ಕನಸು ನನಸಾಗೋ ವರ್ಷ ಬಂದಿದೆ ತಾಲೂಕಿನ ಚಿತ್ರಕಲಾ ವಿಭಾಗದಲ್ಲಿ ತಾಲೂಕಿಗೆ ವರ್ಲ್ಡ್ ರೆಕಾರ್ಡ್ ಅನ್ನು ತಂದುಕೊಟ್ಟಿದ್ದಾರೆ. ಅದಲ್ಲದೆ ಹೆಮ್ಮೆಯ ಪದವಿಯಲ್ಲಿ ನಮ್ಮ ತಾಲೂಕಿನವರು ಗೋಲ್ಡ್ ಮೆಡಲ್ ಟಾಪರ್ಸ್ ತಾಲೂಕಿನ ಯುವಕರು ಹಲವಾರು ಕೊಡುಗೆಗಳನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು.