ನಿಜವಾದ ಸ್ವಾತಂತ್ರ್ಯ ತಂದವರು ಅನಾಮಧೇಯ ಹೋರಾಟಗಾರರು – CM ಬಸವರಾಜ ಬೊಮ್ಮಾಯಿ

ಬೆಂಗಳೂರು: ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ತಂದವರು ಅನಾಮಧೇಯ ಹೋರಾಟಗಾರರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು 75ನೇ ಸ್ವಾತಂತ್ರ್ಯೋತ್ಸವದ ಅಮೃತ್ ಮಹೋತ್ಸವದ ಅಂಗವಾಗಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ‘ ಅಮೃತ ಭಾರತಿಗೆ ಕರುನಾಡ ಜಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಹೋರಾಟದ ನೇತೃತ್ವ ವಹಿಸಿದವರು ತಿಲಕ್, ವೀರ ಸಾವರ್ಕರ್, ಮಹಾತ್ಮಾ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಲಾಲಾ ಲಜಪತ್ ರಾಯ್, ಚಂದ್ರಶೇಖರ್ ಆಜಾದ್, ತಾತ್ಯಾ ಟೋಪಿ, ಕಿತ್ತೂರು ಚನ್ನಮ್ಮ , ಸಂಗೊಳ್ಳಿ ರಾಯಣ್ಣ, ಝಾನ್ಸಿ ಬಾಯಿ ಲಕ್ಷ್ಮಿ ಬಾಯಿ,ಉಕ್ಕಿನ ಮನುಷ್ಯ ವಲ್ಲಭ ಭಾಯಿ ಪಟೇಲ್ ಇವರೆಲ್ಲ ನೇತೃತ್ವದಲ್ಲಿ ಭಾರತವನ್ನು ಒಂದು ಮಾಡಿದೆ ಎಂದರು.

ಇತಿಹಾಸ ಬರೆಯುವವರು ಬದಲಾಯಿಸಲು ಪ್ರಯತ್ನಿಸಿದ್ದಾರೆ

ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಇಡೀ ಭಾರತ ಮುಂದುವರೆದಿದೆ. ಸ್ವಾತಂತ್ರ್ಯ ಹೋರಾಟದ ಇತಿಹಾಸ ವನ್ನು ಯಾರು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಇತಿಹಾಸ ಬರೆಯುವವರು ಬದಲಾಯಿಸುವ ಪ್ರಯತ್ನ ಮಾಡಿದ್ದಾರೆ. ಸತ್ಯವನ್ನು ಹೇಳುವ ಹಾಗೂ ಇಂದಿನ ಜನಾಂಗ ಅದನ್ನು ಅರಿಯುವ ಕಾಲಬಂದಿದೆ. ಸ್ವಾತಂತ್ರ್ಯ ನಮಗೆ ಸಾವಿರಾರು ಯುವಕರು, ರೈತರು ಕೂಲಿಕಾರ್ಮಿಕರು ತ್ಯಾಗ, ಬಲಿದಾನ ಮಾಡಿದ ಕಾರಣ ಬಂದಿತು. ಬೆಂಗಳೂರಿನಲ್ಲಿಯೇ 25 ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಅವರ ಹೆಸರು ಎಲ್ಲೂ ಪ್ರಕಟವಾಗೋಲ್ಲ. 47 ಕ್ಕಿಂತ 150 ವರ್ಷ ಮೊದಲು ಪ್ರಾರಂಭವಾದ ಹೋರಾಟ ಕರ ನಿರಾಕರಣೆ ಬಾರ್ಡೋಲಿ ಸತ್ಯಾಗ್ರಹ, ಇಂಡಿಗೋ, ಡೆಕ್ಕನ್ ಸತ್ಯಾಗ್ರಹ ಬ್ರಿಟಿಷ್ ಆಡಳಿತವನ್ನು ನಡುಗಿಸಿತು. ಚಂಪಾರನ್ ಸತ್ಯಾಗ್ರಹವನ್ನು ಎರಡು ದುಡಿಯುವ ವರ್ಗ ತಿರುಗಿಬಿದ್ದಾಗ ಬ್ರಿಟಿಷರು ಈ ದೇಶವನ್ನು ಆಳಲು ಸಾಧ್ಯವಿಲ್ಲ ಎಂದು ಮನಗಂಡರು. ಜಲಿಯನ್ ವಾಳ ಬಾಗ್ ನಲ್ಲಿ 400 ಜನ ಪ್ರಾಣ ತ್ಯಾಗ ಮಾಡಿದರು. ಅವರ ಹೆಸರು ಎಲ್ಲಿಯೂ ಬರುವುದಿಲ್ಲ ಎಂದರು.

ಸರಿಯಾದ ಇತಿಹಾಸ ಹೇಳುವ ಕಾಲ

ಇತಿಹಾಸವನ್ನು ಬಲ್ಲವರು ಭವಿಷ್ಯ ಬರೆಯಲು ಸಾಧ್ಯ. ಸರಿಯಾದ ಇತಿಹಾಸ ಹೇಳುವ ಕಾಲವಿದು. ನಾರಾಯಣ್ ದೋಣಿ ಎಂಬ ಹುಬ್ಬಳ್ಳಿಯ 12 ವರ್ಷದ ಬಾಲಕ ವಂದೇ ಮಾತರಂ ಹೇಳಿದ್ದಕ್ಕೆ ಬ್ರಿಟಿಷ್ ರ ಗುಂಡಿಗೆ ಬಲಿಯಾದ. ಅಂಕೋಲದ ಉಪ್ಪಿನ ಸತ್ಯಾಗ್ರಹ, ಈಸೂರಿನ ಸತ್ಯಾಗ್ರಹಗಳಲ್ಕಿ ಗೋಲಿಬಾರ್ ಮರಣ ದಂಡನೆಯೂ ಆಯಿತು. ಅವರ ಹೆಸರುಗಳು ಇಲ್ಲ. 75 ವರ್ಷಗಳ ಅಮೃತ ಮಹೋತ್ಸವ ಸಾವಿರಾರು ಅನಾಮಧೇಯ, ತ್ಯಾಗ ಮಾಡಿದ ಹೋರಾಟಗಾರರಿಗೆ ಸಮರ್ಪಣೆಯಾಗಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದ ದಿನವೇ ವಿಭಜನೆ ಆಗಿದೆ. ಇದಕ್ಕಿಂತ ದೊಡ್ಡ ದುರಂತವಿಲ್ಲ. ವಿಭಜನೆ ತಡೆಯಲು ವೀರ ಸಾವರ್ಕರ್, ಗಡಿ ನಾಡ ಗಾಂಧಿ ಅಬ್ದುಲ್ ಗಫಾರ್ ಖಾನ್ ಪ್ರಯತ್ನ ಪಟ್ಟರೂ ಸಫಲರಾಗಿಲ್ಲ. ಸಾವಿರಾರು ಜನ ಆಸ್ತಿ ಪಾಸ್ತಿ, ತುಳಿತಕ್ಕೆ ಒಳಗಾದರು, ಆಹಾರವಿಲ್ಲದೆ ಪ್ರಾಣವನ್ನು ತೆತ್ತರು . 10.ಲಕ್ಷ ಜನ ಭಾರತಕ್ಕೆ ನಿರಾಶ್ರಿತರಾಗಿ ಬಂದರು. ಸ್ವಾತಂತ್ರ್ಯ ನಂತರದ ಪಯಣ ಹೀಗೆ ಪ್ರಾರಂಭವಾಗಿದ್ದು ದುರಂತ ಎಂದರು.

ದೇಶವನ್ನು 75 ವರ್ಷಗಳ ಕಾಲ ಕಟ್ಟಿದ ರೈತರು, ಗಡಿ ಕಾಯುವ ವೀರ ಯೋಧರು, ವಿಜ್ಞಾನಿಗಳು, ಶಿಕ್ಷಕರು, ಕೂಲಿಕಾರ್ಮಿಕರು, ದೀನದಲಿತರಿಗೆ ನಮನಗಳನ್ನು ಮುಖ್ಯಮಂತ್ರಿಗಳು ಸಲ್ಲಿಸಿದರು.

ನಮ್ಮ ದೇಶ ನಾಡು ಸಂಪದ್ಭರಿತ ವಾದುದು. ದೇಶದ ಅಖಂಡತೆ, ಏಕತೆ ಕಾಪಾಡುವುದು ದೊಡ್ಡ ಸವಾಲು. ಸ್ವಾತಂತ್ರ್ಯ ಯಾರು ತಂದರೆಂದು ಪೈಪೋಟಿ ಮಾಡುತ್ತಿದ್ದಾರೆ ಎಂದರು.

ಕರ್ನಾಟಕದ ಮಹನೀಯರನ್ನು ಸರ್ಕಾರ ಸ್ಮರಿಸಿದೆ

ಕರ್ನಾಟಕದ. ಮೈಲಾರ. ಮಹದೇವಪ್ಪ, ಸಾಹುಕಾರ ಚೆನ್ನಯ್ಯ, ಚಂಗಲರಾಯರೆಡ್ಡಿ, ಇದ್ದಾರೆ. ಸರ್ಕಾರದ ಪ್ರಕಟಣೆಯಲ್ಲಿ ಹಿಂದೆದೂ ಬಾರದ ಕನ್ನಡ ನಾಡಿನ ಹೋರಾಟಗಾರರ ಚಿತ್ರಗಳನ್ನು ಹಾಕಿ ನಿನ್ನೆ ಪ್ರಕಟಣೆ ಮಾಡಲಾಯಿತು. ಅದರ ಬಗ್ಗೆ ಒಳ್ಳೆ ಮಾತುಗಳನ್ನು ಆಡಲಿಲ್ಲ. ಈವರೆಗೆ ಅವರ ಕಾರ್ಯಗಳನ್ನು ಗುರುತಿಸಿರಲ್ಲಿಲ್ಲ. ನಾವು ಅದನ್ನು ಮಾಡಿದರೆ, ಅವರ ನಾಯಕರ ಚಿತ್ರವಿಲ್ಲ ಎಂದು ದುಃಖ ಪಡುತ್ತಿದ್ದಾರೆ. 65 ವರ್ಷ ಅವರ ಹೆಸರಿನಲ್ಲಿಯೇ ದೇಶ ನಡೆಸಿದ್ದಾರೆ. ನಾವು ಅವರನ್ನು ಮರೆತಿಲ್ಲ. ಅವರ ಕೆಲಸಗಳನ್ನು ಮರೆತಿಲ್ಲ. ಅವರ ಬಗ್ಗೆ ಗೌರವ ಇದೆ. ಪ್ರಕಟಣೆಯಲ್ಲಿ ನೆಹರೂನ್ ಅವರ ಚಿತ್ರವೂ ಇದೆ. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ಎಲ್ಲಾ ಪ್ರಧಾನಿಗಳ ಸಾಧನೆಗಳನ್ನು, ಉತ್ತಮ ಕಾರ್ಯಗಳನ್ನು ವಸ್ತು ಸಂಗ್ರಹಾಲಯ ಸ್ಥಾಪಿಸಿದ್ದಾರೆ. ನಮ್ಮ ಸಂಸ್ಕೃತಿ ಒಳ್ಳೆಯದನ್ನು ಸ್ಮರಿಸುವುದು. ಅದರೊಂದಿಗೆ 65 ವರ್ಷ ಬಿಟ್ಟಿರುವ ಹೆಸರುಗಳನ್ನು ಸ್ಮರಿಸುತ್ತಿದ್ದೇವೆ. ಸಂವಿಧಾನ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂಸತ್ ಭವನದೊಳಗೆ ಜಾಗ ಕೊಡಲಿಲ್ಲ. ತೀರಿಕೊಂಡಾಗ ಸ್ಥಳ ನೀಡಲಿಲ್ಲ. ಸ್ಮಾರಕಗಳನ್ನು ಅಲ್ಲಲ್ಲೇ ಬಿಟ್ಟಿದ್ದಾರೆ. ಕರ್ನಾಟಕದ ಲ್ಲಿ ಅಂಬೇಡ್ಕರ್ ಭೇಟಿ ನೀಡಿದ 10 ಸ್ಥಳಗಳ ಸ್ಮಾರಕಕ್ಕೆ 25 ಕೋಟಿ ರೂ ಬಜೆಟ್ ನಲ್ಲಿ ನೀಡಿದೆ.
ಈ ದೇಶ ನಮ್ಮದೆಂಬ ಭಾವನೆಯಿಂದ ಅಭಿಮಾನದಿಂದ ಮುಂದೆ ಹೋಗಬೇಕಿದೆ.

ಅಮೃತ ಕಾಲಕ್ಕೆ ಭದ್ರ ಬುನಾದಿ

ದೇಶದ ಪ್ರತಿಯೊಬ್ಬರ ಶಕ್ತಿಯನ್ನು, ಆತ್ಮವನ್ನು ಒಂದುಗೂಡಿಸಿರುವುದು ನಮ್ಮ ಪ್ರಧಾನಿಗಳು. ಅಮೃತ ಕಾಲಕ್ಕೆ ಭದ್ರ ಬುನಾದಿ ಹಾಕಬೇಕು. ಹರ್ ಘರ್ ತಿರಂಗಾ ಕರೆ ನೀಡಿ 40 ಕೋಟಿ ಧ್ವಜ ಹಾರಿದೆ. 46 ರ ಸಂಭ್ರಮ ಮರುಕಳಿಸಿದೆ. ತ್ರಿವರ್ಣ ಧ್ವಜ, ದೇಶಭಕ್ತಿ ಹಾಗೂ ಪ್ರಧಾನಿಗಳ ಶಕ್ತಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

About The Author