Wednesday, September 17, 2025

Latest Posts

ಸಿನಿಮಾ ಲೋಕದ ಇಂಟ್ರಸ್ಟಿಂಗ್ ಸ್ಟೋರಿ ಫಟಾಫಟ್ ವಿಚಾರ

- Advertisement -

ಗಾಯಕ ವಿಜಯ್ ಪ್ರಕಾಶ್ ಹಾಡಿರುವ ವಂದೇ ಮಾತರಂ ಹಾಡಿನಲ್ಲಿ ಕನ್ನಡದ ಸಿನಿಮಾ ತಾರೆಯರು ಮತ್ತು ಹಲವು ಸಾಧಕರು ಇದ್ದಾರೆ. ಆದರೆ ಈ ಹಾಡಿನಲ್ಲಿ ಕನ್ನಡದ ಪ್ರಮುಖ ನಟರಾದ ದರ್ಶನ್, ಯಶ್, ಉಪೇಂದ್ರ ಯಾಕಿಲ್ಲ ಎನ್ನುವ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ.

ನಯನತಾರಾ ಮತ್ತು ವಿಘ್ನೇಶ್ ಶಿವನ್ ರಜೆಯ ಮಜಕ್ಕಾಗಿ ಸ್ಪೇನ್‌ನ ಬಾರ್ಸಿಲೋನಾಕ್ಕೆ ಹಾರಿದ್ದಾರೆ.ವಿಕ್ಕಿ ಜೊತೆಗಿನ ರೊಮ್ಯಾಂಟಿಕ್ ಟೂರ್ ಬಗ್ಗೆ ನಯನ ತಾರ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ..

75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಿನ್ನೆ(ಆಗಸ್ಟ್ 15) ಸಂಜೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದ ‘ತಿರಂಗ ರಾಗಾ’ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಿದ್ದರು. ಸದ್ಯ ಕಾಂಟ್ರವರ್ಸಿಯಲ್ಲೇ ನಾನಿರೋದು ಮಾತೇತ್ತಿದ್ರೆ ಕಾಂಟ್ರವರ್ಸಿಯಲ್ಲಿ ಇರ್ತೀನಿ. ಮಾತಾಡೋಕೆ ಭಯ, ಏನ್ ಮಾತಾಡಿದ್ರು ಕಾಂಟ್ರವರ್ಸಿ ಆಗುತ್ತೆ ಎಂದು ವ್ಯಂಗ್ಯವಾಡಿದ್ರು.

ಸ್ಯಾಂಡಲ್‌ವುಡ್‌ನ ಕ್ರೇಜಿ ಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆಮಾಡಿದೆ. ಮನೋರಂಜನ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.ಸಂಗೀತ ಅಮ್ಮ ನೋಡಿದ ಹುಡುಗಿ .ಸಂಗೀತಾ ತುಂಬಾ ಪ್ರೊಫೆಷನಲ್ ತನಗೆ ಇಷ್ಟವಾದುದ್ದನ್ನು ಮಾಡುತ್ತಾಳೆ. ಎಂದು ಭಾವಿ ಪತ್ನಿ ಬಗ್ಗೆ ಮನೋರಂಜನ್ ಮಾತಾಡಿದ್ದಾರೆ.

‘ಕೆಜಿಎಫ್ ಚಾಪ್ಟರ್ 2’ ಬಳಿಕ ಪ್ರಶಾಂತ್ ನೀಲ್ ವರ್ಲ್ಡ್‌ ಫೇಮಸ್ ಆಗಿದ್ದಾರೆ.ಇತ್ತೀಚೆಗೆ ಪ್ರಶಾಂತ್ ನೀಲ್ ತನ್ನ ಹುಟ್ಟೂರಾದ ನೀಲಕಂಠಪುರಂ ಎಂಬ ಹಳ್ಳಿಗೆ ವಿಸಿಟ್ ಹಾಕಿದ್ದರು. ಅದಕ್ಕೊಂದು ಕಾರಣವಿತ್ತು. ಎಲ್‌ ವಿ ಪ್ರಸಾದ್ ಐ ಹಾಸ್ಟಿಟಲ್‌ ನಿರ್ಮಾಣಕ್ಕೆ ಸುಮಾರು 50ಲಕ್ಷ ರೂ. ಹಣವನ್ನು ದೇಣಿಯಾಗಿ ನೀಡಿದ್ದಾರೆ. ಈ ವಿಷಯವನ್ನು ಅವರ ಸಂಬಂಧಿ ಡಾ.ಎನ್‌ ರಘುವೀರ ರೆಡ್ಡಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನೋತ್ಸವದ ಸಂಭ್ರಮದಲ್ಲಿ ಮನೆಗಳಲ್ಲಿ ಧ್ವಜಾರೋಹಣ ಮಾಡಿ ತಾರೆಯರು ಗಮನ ಸೆಳೆದಿದ್ದಾರೆ. ಬಾಲಿವುಡ್ ತಾರೆಯರು ಸಹ ಮನೆಗಳ ಮೇಲೆ ಧ್ವಜಾರೋಹಣ ಮಾಡಿದ್ದಾರೆ. ಶಾರುಖ್‌ ಖಾನ್, ಚಿರಂಜೀವಿ, ಅರ್ಜುನ್ ಸರ್ಜಾ, ಯಶ್‌ ಸೇರಿದಂತೆ ಸೂಪರ್ ಸ್ಟಾರ್‌ಗಳೆಲ್ಲಾ ಧ್ವಜಾರೋಹಣ ಮಾಡಿ, ರಾಷ್ಟ್ರ ಧ್ವಜ ಹಿಡಿದು ಗೌರವ ಸಲ್ಲಿಸಲಿದ್ದಾರೆ. ಮೈಸೂರಿನ ಶಕ್ತಿಧಾಮದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಟ ಶಿವರಾಜ್‌ಕುಮಾರ್ ದಂಪತಿ ಭಾಗಿ ಆಗಿದ್ದರು.

ಕ್ರಾಂತಿ ಸಿನಿಮಾದ ಹೊಸ ಪೋಸ್ಟರ್ ರಿಲೀಸ್: ಪೋಸ್ಟರ್ ನಲ್ಲಿದೆ ಹೊಸತನ

ವಂದೇ ಮಾತರಂ ಹಾಡಿನಲ್ಲಿಲ್ಲ ದರ್ಶನ್,ಯಶ್: ಅಭಿಮಾನಿಗಳಿಂದ ಸರಕಾರಕ್ಕೆ ಪ್ರಶ್ನೆ

 

- Advertisement -

Latest Posts

Don't Miss