ಬೆಂಗಳೂರು: ನಿನ್ನೆ ಶಿವಮೊಗ್ಗದಲ್ಲಿ ನಡೆದಂತ ಘಟನೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಈ ಕಾರಣದಿಂದಾಯೇ ಇದುವರೆಗೆ ಕಾಂಗ್ರೆಸ್ ಘಟನೆ ಸಂಬಂಧ ಯಾವುದೇ ಮಾತನ್ನು ಆಡುತ್ತಿಲ್ಲ. ಕೇರಳದಿಂದಲೂ ಹೊರಗಡೆಯಿಂದ ಬಂದವರಿಂದಲೂ ಈ ರೀತಿ ಆಗ್ತಿದೆ ಎಂಬುದಾಗಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಇಂದು ಮುಖ್ಯಮಂತ್ರಿಗಳ ರೇಸ್ ಕೊರ್ಸ್ ನಿವಾಸದಲ್ಲಿ ಮಾತನಾಡಿದಂತ ಅವರು, ನಿನ್ನೆಯ ಶಿವಮೊಗ್ಗ ಪ್ರಕರಣದಲ್ಲಿ 6 ಜನ ಗುಂಡಾಗಳು ಪ್ರೇಮ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರೇಮ್ ಸಿಂಗ್ ಆಸ್ಪತ್ರೆಯಲ್ಲಿದ್ದಾನೆ. ಅವನು ಸಾವು ಬದುಕಿನ ಮಧ್ಯೆ ಹೊರಾಟ ಮಾಡತಾ ಇದಾನೆ ಅಂತನೂ ಡಾಕ್ಟರ್ ಹೇಳ್ತಾ ಇದ್ದಾರೆ. ಏನು ಹೇಳೋಕೆ ಆಗೋದಿಲ್ಲ ಅಂತನೂ ಹೇಳ್ತಾರೆ ಎಂದರು.
ಈ ಘಟನೆ ಸಂಬಂಧ ಇಂದು ಒಂದು ಫೈರಿಂಗ್ ಮಾಡಿದ್ದಾರೆ. ಈವರೆಗೆ ಮೂರು ಜನ ಅರೆಸ್ಟ್ ಬಂದ್ದಾರೆ ಇನ್ನೂ ಮೂರು ಜನ ಸಿಕ್ಕಿಲ್ಲ. ನಮ್ಮ ಶಿವಮೊಗ್ಗ ಜನ ಶಾಂತಿಪ್ರೀಯರ ಊರು. ಹೊರಗಡೆಯಿಂದ ಬಂದ ಜನರಿಂದ ಈ ಕೃತ್ಯ ನಡೆದಿದೆ. ಈಗ ಈ ಘಟನೆ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿದ್ದೇನೆ. ಈ ಘಟನೆ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಸಿಎಂ ಹಾಗೂ ಗೃಹ ಸಚಿವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕೃತ್ಯ ಎಸೆಗಿದವರನ್ನ ಕೂಡಲೇ ಬಂಧಿಸುವ ಕೆಲಸ ಸರ್ಕಾರ ಮಾಡಿದೆ. ನಮ್ಮ ಸರ್ಕಾರ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಪೊಲೀಸ್ ಇಲಾಖೆ ಸಾಕಷ್ಟು ಶ್ರಮ ಹಾಕಿ ಕೆಲಸ ಮಾಡ್ತಿದ್ದಾರೆ ಎಂದರು.
ಕೆಲವು ಮುಸಲ್ಮಾನ ಗುಂಡಾಗಳಿಗೆ ನಾನ್ ಹೇಳ್ತೀನಿ. ಯಾರು ಗುಂಡಾಗಳಿದ್ದಾರೆ ಅವರಿಗೆ ಕರೆದು ಮುಸ್ಲಿ ನಾಯಕರು ಬುದ್ದಿವಾದ ಹೇಳಬೇಕು. ಇಲ್ಲ ಅಂದ್ರೆ ಅಂತ ಗುಂಡಾಗಳನ್ನ ಸರ್ಕಾರ ನೋಡಿಕೊಳ್ಳುತ್ತೆ. ಈ ಘಟನೆ ಮಾಡಿದ್ದು ಎಸ್ ಡಿಪಿಐ ಕಾರ್ಯಕರ್ತ ಅವನ ಹೆಂಡ್ತಿ ಕಾಂಗ್ರೆಸ್ ಪಾಲಿಕೆ ಸದಸ್ಯರು. ಎಸ್ ಡಿ ಪಿ ಐ ಬ್ಯಾನ್ ಮಾಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಲಾಗುತ್ತಿದೆ. ಎಸ್ ಡಿ ಪಿಐ ಬ್ಯಾನ್ ಮಾಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಲಾಗಿದೆ. ಅದು ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರುತ್ತೇ ಅನ್ನೊ ನಂಬಿಕೆ ನಮ್ಮದು ಎಂದರು.
ಸರ್ಕಾರದಲ್ಲಿ ಮ್ಯಾನೇಜ್ ಮಾಡುವ ಬಗ್ಗೆ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಾಧುಸ್ವಾಮಿ ಈ ರೀತಿ ಹೇಳಿರೋದು ನಿಜಕ್ಕೂ ತಪ್ಪು. ಅವರು ಕಾನೂನನ್ನು ಚೆನ್ನಾಗಿ ಅರಿತಿರುವರು. ಅವರು ಈ ಮಾತನ್ನು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ನಾನು ಅವರ ಜೊತೆ ಈ ಬಗ್ಗೆ ಖಾಸಗಿಯಾಗಿ ಮಾತಾಡುತ್ತೇನೆ ಎಂದರು.
ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜಾತಿ ಲೇಪನ ಹಚ್ಚಿದ್ದಾರೆ. ಅವರು ಜಾತಿವಾದಿಗಳು ಅನ್ನೋದು ಗೊತ್ತಾಗಿದೆ. ಜವಹರಲಾಲ್ ನೆಹರು ದೇಶ ವಿಭಜನೆ ಮಾಡಿದ್ರು,ಹೀಗಾಗಿ ತೆಗೆದಿದ್ದಾರೆ ಅಂತಾ ಸರ್ಕಾರದ ನಡೆಯನ್ನ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸಮರ್ಥಿಸಿಕೊಂಡರು.
ಹಿಂದೂಗಳ ಗಣಪತಿ ಉತ್ಸವದ ಅಡ್ಡ ಬಂದ್ರೆ ಸರಿ ಇರಲ್ಲ. ನೀವು ನಿಮ್ ಹಬ್ಬ ಮಾಡಲ್ವ? ನಾವು ಬೆಂಬಲ ಕೊಡಲ್ವಾ? ನಮ್ ಹಬ್ಬದ ತಂಟೆಗೆ ಬರಬೇಡಿ ಎಂದು ಹೇಳಿದರು.