- Advertisement -
Banglore news:
ಎಲ್ಲೆಡೆ ಆ್ಯಂಬುಲೆನ್ಸ್ಗಳು ವೇಗದ ಮಿತಿ ಇಲ್ಲದೆ ಓಡಾಡುತ್ತಿರುವ ಹಿನ್ನೆಲೆ ಅಪಘಾತದಂತಹ ದುರ್ಘಟನೆಗಳು ಹೆಚ್ಚಾಗತೊಡಗಿವೆ. ಇದರಿಂದಾಗಿ ಜೀವ ಉಳಿಸಬೇಕಾಗಿರುವ ಆ್ಯಂಬುಲೆನ್ಸ್ ಕೆಲವೊಮ್ಮೆ ಜೀವಕ್ಕೆ ಕುತ್ತು ತರುವಂತಹ ಸನ್ನಿವೇಶಕ್ಕೆ ಒಳಗಾಗುತ್ತದೆ. ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್ ಟೋಲ್ಗೇಟ್ ಬಳಿ ಪಲ್ಟಿ ಹೊಡೆದ ಘಟನೆಯ ನಂತರ ಇದೀಗ ಮತ್ತೊಂದು ಅವಘಡ ಸಂಭವಿಸಿದೆ. ವೇಗವಾಗಿ ಬಂದ ಆ್ಯಂಬುಲೆನ್ಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆಯೊಂದು ನಗರದ ಮತ್ತಿಕೆರೆ ಬಸ್ ನಿಲ್ದಾಣ ಬಳಿ ಸಂಭವಿಸಿದೆ.
ಕೆಲವೊಂದು ಆ್ಯಂಬುಲೆನ್ಸ್ಗಳಲ್ಲಿ ವೇಗದ ಮಿತಿ ಇಲ್ಲದೆ ಶರವೇಗದಲ್ಲಿ ಚಲಾಯಿಸಲಾಗುತ್ತಿದೆ. ಅದರಂತೆ ಮತ್ತಿಕೆರೆ ಬಸ್ ನಿಲ್ದಾಣದ ಬಳಿ ತಡರಾತ್ರಿ 11.30ರ ಸುಮಾರಿಗೆ ವೇಗವಾಗಿ ಬಂದ ಆ್ಯಂಬುಲೆನ್ಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಕ್ಟಿವಾ ಸಪೂರ್ಣ ಜಖಂ ಗೊಂಡಿದ್ದುಮ ಅದೃಷ್ಟವಶಾತ್ ದ್ವಿಚಕ್ರ ವಾಹನದಲ್ಲಿದ್ದ ಸುಹಾಸಿನಿ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂತಹ ಅನೇಕ ಘಟನೆಗಳು ದಿನನಿತ್ಯ ನಡೆಯುತ್ತಿದೆ.ಇದರಿಂದ ಜನ ಕಂಗಾಲಾಗಿದ್ದಾರೆ.ಆ್ಯಂಬ್ಯುಲೆನ್ಸ್ಗಳ ಈ ನಿರ್ಲಕ್ಷ್ಯ ಅತಿವೇಗದ ಓಡಾಟಕ್ಕೆ ಬ್ರೇಕ್ ಬೀಳಬೇಕಿದೆ.
ರಾಯಚೂರನ್ನು ತೆಲಂಗಾಣಕ್ಕೆ ಸೇರಿಸುವ ವಿಚಾರವಾಗಿ ಗರಂ ಆದ ಪ್ರಿಯಾಂಕ್ ಖರ್ಗೆ
“ಗಣೇಶನ ಪಕ್ಕದಲ್ಲಿ ಸಾವರ್ಕರ್ ಫೋಟೋ ಇಡುತ್ತೇವೆ,ತಾಕತ್ತಿದ್ದರೆ ತಡೆಯಿರಿ”: ಮುತಾಲಿಕ್ ಓಪನ್ ಚಾಲೆಂಜ್
- Advertisement -

