ಮಂಡ್ಯ: ಕೆ.ಕೆ.ರಾಧಾಕೃಷ್ಣ ರವರಿಂದ ‘ಜನಮನ ಅಭಿಯಾನ’ ಕಾರ್ಯಕ್ರಮಕ್ಕೆ ಚಾಲನೆ

Mandaya News:

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಆರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕೆ.ಕೆ.ರಾಧಾಕೃಷ್ಣ ಅವರು ಆಗಸ್ಟ್ 20, 2022 ರ ಶನಿವಾರ ಬಂಧಿಗೌಡ ಲೇಔಟ್‌ನಲ್ಲಿಇರುವ ತಮ್ಮ ಗೃಹ ಕಛೇರಿಯ ಅವರಣದಲ್ಲಿ ಬೆಳಿಗ್ಗೆ 10 ಗಂಟೆಗೆ ಆಶಯ ಭಾಷಣ ಮಾಡುವ ಮೂಲಕ ಜನ ಮನಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜನರ ಸಮಸ್ಯೆಗಳಿಗೆ ಸ್ಪಂದನೆ. ದೇವಸ್ಥಾನಗಳ ಜೀಣೋವಾರ, ಜನಪರ ಕಾರ್ಯಗಳಿಗೆ ನೆರವು ಹೀಗೆ ವಿವಿಧ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಅವರು ಕ್ಷೇತ್ರದ ಅಭಿವೃದ್ಧಿ ಹಿರಿತು ತಮ್ಮದೇ ಆದ ಚಿಂತನೆ ಹೊಂದಿದ್ದಾರೆ.ಇವುಗಳ ಅನುಷ್ಠಾನಕ್ಕಾಗಿ ಅಧಿಕಾರವೂ ಆಗತ್ಯ ಎಂಬ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಬಾ ಚುನಾವಣೆಗೆಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಜನಮನ ಅಭಿಯಾನದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಮಟ್ಟ ವಾರ್ಡಿಗೆ : ಕಾರ್ಯಕರ್ತರು ಮನೆ ಮನೆಗೆ ತೆರಳಿ ಕೆ.ಕೆ.ರಾಧಾಕೃಷ್ಣ ಅವರ ವ್ಯಕ್ತಿತ್ವ, ಆಶಯ, ಸಾಮಾಜಿಕ ಕಾರ್ಯಗಳು ಮತ್ತು ಅಭಿವೃದ್ಧಿ ಚಿಂತನೆಗಳನ್ನು ಜನರಿಗೆತಿಳಿಸಲಿದ್ದಾರೆ ಮತ್ತು ಅವರ ಸಮಸ್ಯೆಗಳನ್ನು ತಿಳಿದು, ಪರಿಹಾರ ಒದಗಿಸುವ ಕೆಲಸವನ್ನು ಮಾಡಲಿದ್ದಾರೆ.

ಅಭಿಯಾನದ ಪ್ರಮುಖ ಉದ್ದೇಶಗಳು:

ಅಭ್ಯರ್ಥಿಯ ವ್ಯಕ್ತಿತ್ವ, ಜೀವನದ ಬಗ್ಗೆ ಜನರಿಗೆ ಮಾಹಿತಿ ಜೊತೆಗೆ ಕಳೆದ ಆರು ವರ್ಷಗಳಲ್ಲಿ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕ್ರಮಗಳ ಮನವರಿಕೆ.

ಅಭ್ಯರ್ಥಿಯ ಚುನಾವಣೆ ಸ್ಪರ್ಧೆಯ ಉದ್ದೇಶ, ಗುರಿ,ಕ್ಷೇತ್ರದ ಅಭಿವೃದ್ಧಿ ಚಿಂತನ ಕುರಿತು ಜಾಗೃತಿ ಮೂಡಿಸುವುದು.

ಮನೆಮನೆಗೆ ಹೋಗಿ ಅವರ ಸ್ಥಳೀಯ ಸಮಸ್ಯೆಗಳ ಗುರುತಿಸಲಾಗುವುದು. ಹೀಗೆ ಗುರುತಿಸಲಾದ ಸಮಸ್ಯೆಗಳನ್ನು ಪ್ರಾಮಖ್ಯತೆ ಆಧರಿಸಿ ಸ್ಥಳೀಯವಾಗಿ ಬಗಹರಿಸುವ ಸಾಧ್ಯತೆಗಳಿದ್ದರೆ ಒತ್ತು ನೀಡಲಾಗುವುದು. ಸರ್ಕಾರ, ಅಧಿಕಾರಿಗಳ ಮಟ್ಟದಲ್ಲಿ ಯತ್ನಿಸಲಾಗುವುದು..

ಒಟ್ಟಾರೆ, ಜನರ ಮನಸ್ಸನ್ನು ಅರಿಯುವ ಮೂಲಕ ಎಲ್ಲರನ್ನು ಒಳಗೊಂಡಂತೆ ಸಮೃದ್ದ ಮಂಡ್ಯವನ್ನು ಕಟ್ಟುವಕನಸನ್ನು ಸಾಕಾರಗೊಳಿಸುವುದು ಇದರ ಮುಖ್ಯ ಗುರಿಯಾಗಿದೆ.

 

ಮಂಡ್ಯ: ಡಿ.ದೇವರಾಜ ಅರಸುರವರ 107ನೇ ಜನ್ಮ ದಿನಾಚರಣೆ

 

About The Author